Home Karnataka State Politics Updates ಸಿಎಂ ಯಡಿಯೂರಪ್ಪ ಪದತ್ಯಾಗದ ನೋವು ತಾಳಲಾರದೆ ವ್ಯಕ್ತಿ ಆತ್ಮಹತ್ಯೆ !

ಸಿಎಂ ಯಡಿಯೂರಪ್ಪ ಪದತ್ಯಾಗದ ನೋವು ತಾಳಲಾರದೆ ವ್ಯಕ್ತಿ ಆತ್ಮಹತ್ಯೆ !

Hindu neighbor gifts plot of land

Hindu neighbour gifts land to Muslim journalist

ರಾಜ್ಯವಿಡಿ ಒಂದು ರೀತಿಯಲ್ಲಿ ದುಃಖಿಸುತ್ತಿರುವ ಸಮಯದಲ್ಲಿ, ಸಿಎಂ ಸ್ಥಾನಕ್ಕೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.

ಇದನ್ನು ಅಭಿಮಾನ ಎನ್ನಬೇಕೋ ಅಥವಾ ಅಮಾಯಕತೆ ಎನ್ನಬೇಕೋ ಗೊತ್ತಿಲ್ಲ. ತನ್ನ ಪ್ರೀತಿಯ ನಾಯಕನ ಹಠಾತ್ ನಿರ್ಗಮನಕ್ಕೆ ಬೇಸತ್ತ ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಚಾಮರಾಜನಗರ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ರವಿ (35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ನಿವಾಸಿಯಾದ ಈತ ಬಿಎಸ್‍ವೈ ಅವರ ಕಟ್ಟರ್ ಅಭಿಮಾನಿಯಾಗಿದ್ದನು.

ನಿನ್ನೆ ಯಡಿಯೂರಪ್ಪ ರಾಜೀನಾಮೆ ನೀಡಿದ ನಂತರ ಆತ ತಳಮಳ ಗೊಂಡಿದ್ದನು. ಮನೆಯಲ್ಲಿ ನೊಂದುಕೊಂಡು ಕಣ್ಣೀರು ಹಾಕಿದ್ದನು. ಕೊನೆಗೆ ಇದೇ ಕುರಿತಾಗಿ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.