Home Entertainment 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಎ ಪ್ರೆಗ್ನೆಂಟ್ ವಿಡೋ’ ಮಲಯಾಳಂ ಚಿತ್ರ ಪ್ರದರ್ಶನ

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಎ ಪ್ರೆಗ್ನೆಂಟ್ ವಿಡೋ’ ಮಲಯಾಳಂ ಚಿತ್ರ ಪ್ರದರ್ಶನ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು, 31 ಜನವರಿ 2026: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಲಯಾಳಂನ ‘ಎ ಪ್ರೆಗ್ನೆಂಟ್ ವಿಡೋ’ ಚಲನಚಿತ್ರ ಪ್ರದರ್ಶನಗೊಳ್ಳುವ ಮೂಲಕ ಚಿತ್ರತಂಡಕ್ಕೆ ಮಹತ್ವದ ಮೈಲಿಗಲ್ಲನ್ನು ತಂದುಕೊಟ್ಟಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಚಿತ್ರವನ್ನು ಪ್ರಸ್ತುತಪಡಿಸಲು ಅವಕಾಶ ನೀಡಿದ್ದಕ್ಕಾಗಿ ಚಿತ್ರತಂಡ ಕೃತಜ್ಞತೆ ಸಲ್ಲಿಸಿದೆ.

ಉನ್ನಿ ಕೆ.ಆರ್. ನಿರ್ದೇಶನದ ಈ ಚಿತ್ರವು ಸಾಮಾಜಿಕ ಕಾಳಜಿಯ ಕಥಾವಸ್ತುವನ್ನು ಹೊಂದಿದ್ದು, ಚಿತ್ರದ ಬಗ್ಗೆ, ʼತನ್ನ ಪತಿಯ ಮರಣದ ನಂತರ ವ್ಯವಸ್ಥಿತ ಅನ್ಯಾಯದ ವಿರುದ್ಧ ಹೋರಾಡುವ ಏಳು ತಿಂಗಳ ಗರ್ಭಿಣಿಯ ಪ್ರಯಾಣವನ್ನು ಈ ಸಿನಿಮಾ ಚಿತ್ರಿಸುತ್ತದೆ. ಸರ್ಕಾರಿ ಉದ್ಯೋಗಿಯಾಗಿದ್ದ ಪತಿ ಬಣ್ಣ, ಜಾತಿ ಮತ್ತು ಸಾಮಾಜಿಕ ಗುರುತಿನ ಕಾರಣದಿಂದ ನಿರಂತರ ತಾರತಮ್ಯ ಎದುರಿಸಿ ಮೃತಪಡುತ್ತಾನೆ. ನಂತರ ಒಬ್ಬಂಟಿಯಾಗುವ ಗರ್ಭಿಣಿ ಮಹಿಳೆ, ಸರ್ಕಾರಿ ಸೌಲಭ್ಯಗಳು ಮತ್ತು ಉದ್ಯೋಗವನ್ನು ಪಡೆಯಲು ತನ್ನ ವೈವಾಹಿಕ ಸ್ಥಿತಿಯನ್ನು ಅಧಿಕೃತ ದಾಖಲೆಗಳ ಮೂಲಕ ಸಾಬೀತುಪಡಿಸಲು ನಡೆಸುವ ಹೋರಾಟವೇ ಈ ಚಿತ್ರದ ಕಥೆ, ಈ ಚಿತ್ರವು ಸರ್ಕಾರದ ವಿರುದ್ಧವಲ್ಲ, ಬದಲಿಗೆ ದುರ್ಬಲ ವ್ಯಕ್ತಿಗಳನ್ನು ಕಡೆಗಣಿಸುವ ಕಠಿಣ ವ್ಯವಸ್ಥೆಯ ವಿರುದ್ಧದ ಪ್ರಶ್ನೆʼ ಎಂದು ಅವರು ಹೇಳಿದರು.

ಚಿತ್ರದ ನಾಯಕಿ ಟ್ವಿಂಕಲ್ ಜೋಬಿ ಮಾತನಾಡಿ, ʼಬೆಂಗಳೂರಿನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವದಕ್ಕೆ ಹೆಮ್ಮೆ ಆಗುತ್ತಿದೆ. ಇದು ನಾನು ನಿರ್ವಹಿಸಿದ ಅತ್ಯಂತ ಶಕ್ತಿಯುತ ಪಾತ್ರಗಳಲ್ಲಿ ಒಂದು. ಈ ಪಾತ್ರಕ್ಕಾಗಿ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಿರ್ದೇಶಕ ಉನ್ನಿ ಕೆ.ಆರ್. ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದಗಳು” ಎಂದು ಹೇಳಿದರು.

ಈ ಚಿತ್ರವು ಈಗಾಗಲೇ ಕೋಲ್ಕತ್ತಾ, ಪುಣೆ, ಚೆನ್ನೈ ಮತ್ತು ಶ್ರೀಲಂಕಾದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಂಸೆ ಗಳಿಸಿದೆ.