Home News ಬೆಳ್ತಂಗಡಿ: ಕೆಲ್ಲಗುತ್ತು ಕಿನ್ಯಮ್ಮ ಸಭಾಭವನ ಪರವಾನಿಗೆ ರದ್ದು

ಬೆಳ್ತಂಗಡಿ: ಕೆಲ್ಲಗುತ್ತು ಕಿನ್ಯಮ್ಮ ಸಭಾಭವನ ಪರವಾನಿಗೆ ರದ್ದು

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಅಕ್ರಮವಾಗಿ ಸರಕಾರದ ಜಮೀನಿನಲ್ಲಿ ಸಭಾಭವ ನಿರ್ಮಾಣ ಮಾಡಿರುವ ಕಾರಣದಿಂದ ಪಟ್ಟಣ ಪಂಚಾಯತ್‌ ಅಧಿಕಾರಿಗಳು ಪರವಾನಿಗೆಯನ್ನು ರದ್ದು ಮಾಡಿ ಆದೇಶ ಹೊರಡಿಸಿರುವ ಕುರಿತು ವರದಿಯಾಗಿದೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜು ರಸ್ತೆಯ, ಜೈನ್‌ ಪೇಟೆಯಲ್ಲಿರುವ ಸ.ನ.64/14 ರಲ್ಲಿ 4.31 ಎಕರೆ ಸರಕಾರಿ ಜಮೀನಿನಲ್ಲಿ ಅನಧಿಕೃತವಾಗಿ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸಭಾಭವ ನಿರ್ಮಾಣ ಮಾಡಿರುವ ಕುರಿತು ಹರಿಪ್ರಸಾದ್‌ ಎಂಬುವವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಸೂಕ್ತ ದಾಖಲೆಗಳ ಕುರಿತು ಶ್ರೀ ಕೆ. ಜಯವರ್ಮ ರಾಜ ಬಲ್ಲಾಳ್‌ ಎನ್ನುವವರಿಗೆ ನೋಟಿಸ್‌ ಜಾರಿ ಮಾಡಿದ್ದರು.

ಈ ಕುರಿತು ಸಭಾಭವನ ಕುರಿತು ಪಹಣಿ ಪತ್ರವನ್ನು ಪಟ್ಟಣ ಪಂಚಾಯತ್‌ಗೆ ನೀಡಿದಾಗ ಅದರಲ್ಲಿ ಸಭಾಭವನ ಸರಕಾರ ಎಂದು ನಮೂದು ಮಾಡಲಾಗಿದೆ ಎಂದು ವರದಿಯಾಗಿದೆ. ಇದರಿಂದ ಸಭಾಭವನಕ್ಕೆ ನೀಡಿದ ಉದ್ದಿಮೆ ಪರವಾನಿಗೆಯನ್ನು ಜ.29 ರಂದು ರದ್ದು ಮಾಡಲಾಗಿದೆ.

ನೋಟಿಸ್‌ ತಲುಪಿದ ದಿನದಿಂದ ಮುಂದೆ ಈ ಕಿನ್ಯಮ್ಮ ಸಭಾಭವನದ ಕಟ್ಟಡದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಶ್ರೀ ಕೆ.ಜಯವರ್ಮ ರಾಜ ಬಲ್ಲಾಳ್‌ ಇವರಿಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಸೂಚನೆ ನೀಡಲಾಗಿದೆ.