Home Entertainment 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಿವೇದಿತ ಶಿವರಾಜಕುಮಾರ್ ನಿರ್ಮಾಣದ “ಫೈರ್ ಫ್ಲೈ” ಚಿತ್ರಕ್ಕೆ ಮೆಚ್ಚುಗೆ

17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಿವೇದಿತ ಶಿವರಾಜಕುಮಾರ್ ನಿರ್ಮಾಣದ “ಫೈರ್ ಫ್ಲೈ” ಚಿತ್ರಕ್ಕೆ ಮೆಚ್ಚುಗೆ

Hindu neighbor gifts plot of land

Hindu neighbour gifts land to Muslim journalist

17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಿವೇದಿತ ಶಿವರಾಜಕುಮಾರ್ ನಿರ್ಮಾಣದ “ಫೈರ್ ಫ್ಲೈ” ಚಿತ್ರಕ್ಕೆ ಮೆಚ್ಚುಗೆ

ನಟ ಶಿವರಾಜಕುಮಾರ್ ಅವರ ಪುತ್ರಿ ನಿವೇದಿತ ಶಿವರಾಜಕುಮಾರ್ ನಿರ್ಮಾಣದ ಮೊದಲ ಚಿತ್ರ “ಫೈರ್ ಫ್ಲೈ” 17 ನೇ ಅಂತಾರಾಷ್ಟ್ರೀಯ ಬೆಂಗಳೂರು ಚಿತ್ರೋತ್ಸವದ ಕನ್ನಡ ಚಲನಚಿತ್ರ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನವಾಯಿತು. ವಂಶಿಕೃಷ್ಣ ಶ್ರೀನಿವಾಸ್ ನಿರ್ದೇಶನದಲ್ಲಿ ಆನಂದ್ ನೀನಾಸಂ, ರಚನಾ ಇಂದರ್, ಅಚ್ಯುತ್ ಕುಮಾರ್,‌ ಸುಧಾರಾಣಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರ ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಎಲ್ಲರ ಮೆಚ್ಚುಗೆ ಪಡೆಯಿತು.

ಪ್ರದರ್ಶನದ ನಂತರ ಮಾತನಾಡಿದ ನಿರ್ಮಾಪಕಿ ನಿವೇದಿತ ಶಿವರಾಜಕುಮಾರ್, 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನವಾಗಿದ್ದು ಬಹಳ ಖುಷಿಯಾಗಿದೆ. ಆಯೋಜಕರಿಗೆ ಧನ್ಯವಾದ ಎಂದರು.

ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡಿಗರ ಜೊತೆಗೆ ಹೊರ ರಾಜ್ಯ ಹಾಗೂ ದೇಶದವರು ಸಹ ನಮ್ಮ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದು ಬಹಳ ಸಂತೋಷವಾಗಿದೆ. ನಮ್ಮ ಚಿತ್ರ ಅಮೇಜಾನ್ ಪ್ರೈಮ್ ನಲ್ಲೂ ಲಭ್ಯವಿದೆ ಎಂದು ನಿರ್ದೇಶಕ ವಂಶಿಕೃಷ್ಣ ಶ್ರೀನಿವಾಸ್ ತಿಳಿಸಿದರು. ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.