

ನಟ ನವೀನ್ ಶಂಕರ್ ನಾಯಕನಾಗಿ ನಟಿಸಿರುವ ಹಾಗೂ ಕುಲದೀಪ್ ಕಾರಿಯಪ್ಪ ನಿರ್ದೇಶಿಸಿರುವ “ನೋಡಿದವರು ಏನಂತಾರೆ” ಚಿತ್ರ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಜನಪ್ರಿಯ ಕನ್ನಡ ಸಿನಿಮಾ ವಿಭಾಗದಲ್ಲಿ ಪ್ರದರ್ಶನವಾಯಿತು. ಪ್ರದರ್ಶನದ ನಂತರ ಚಿತ್ರತಂಡದವರು ಮಾತನಾಡಿದರು.
ಚಿತ್ರಮಂದಿರದಲ್ಲಿ ನಮ್ಮ ಚಿತ್ರ ನೋಡಿದವರು ಮೆಚ್ಚಿಕೊಂಡಿದ್ದರು. ಈಗ ಚಿತ್ರೋತ್ಸವದಲ್ಲೂ ನಮ್ಮ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು ನಿರ್ದೇಶಕ ಕುಲದೀಪ್ ಕಾರಿಯಪ್ಪ.
ನಮ್ಮ ಚಿತ್ರ ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿದೆ. ಸಿನಿಮಾಗಳ ಹಬ್ಬವೆಂದೆ ಕರೆಯಲ್ಪಡುವ ಚಿತ್ರೋತ್ಸವದಲ್ಲಿ ನಮ್ಮ “ನೋಡಿದವರು ಏನಂತಾರೆ” ಚಿತ್ರವನ್ನು ನೋಡಿದವರು ಮೆಚ್ಚಿಕೊಂಡರು ಎಂದು ನಾಯಕ ನವೀನ್ ಶಂಕರ್ ತಿಳಿಸಿದರು.
ನಾನು ಈ ಹಿಂದೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸಿದ್ದೆ. ಈ ಬಾರಿ ನಾನು ನಾಯಕಿಯಾಗಿ ನಟಿಸಿರುವ “ನೋಡಿದವರು ಏನಂತಾರೆ” ಚಿತ್ರ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನವಾಗಿರುವುದಕ್ಕೆ ಸಂತಸವಾಗಿದೆ ಎಂದು ನಾಯಕಿ ಅಪೂರ್ವ ಭಾರದ್ವಾಜ್ ಹೇಳಿದರು.
ತಮ್ಮ ನಿರ್ಮಾಣದ ಚಿತ್ರ ಈ ಬಾರಿಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶವಾಗಿದೆ. ಆಯೋಜಕರಿಗೆ ಧನ್ಯವಾದ ಎಂದರು ನಿರ್ಮಾಪಕ ನಾಗೇಶ್ ಗೋಪಾಲ್













