

ಬಳಂಜ: ಗ್ರಾಮ ಪಂಚಾಯತ್ ನಿಂದ ವಿಕಲಚೇತನರ ವಿಶೇಷ ಗ್ರಾಮ ಸಭೆಯು ಜ.28ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು
ತಾಲೂಕು ಮಟ್ಟದ ವಿಕಲಚೇತನರ ಅಧಿಕಾರಿಯಾದ ಜೋನ್ ಬಾಸ್ಪಿಸ್ಟ್ ಡಿಸೋಜ ರವರು ಭಾಗವಹಿಸಿದರು. ಅವರು ವಿಕಲಚೇತನರಿಗೆ ಸಿಗುವ ಸವಲತ್ತು ಗಳ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ವಿಕಲಚೇತನರ ಬಗ್ಗೆ ಸಿಗುವ ಸವಲತ್ತು ಬಗ್ಗೆ ಮಾಹಿತಿ ನೀಡಿದರು. ಹಾಗೂ ನಮ್ಮ ಕುಂದು ಕೊರತೆಗಳನ್ನು ಸಭೆಗೆ ತಿಳಿಸುವಂತ ಮನವಿ ಮಾಡಿದರು.

ಪಂಚಾಯತ್ ಅಧ್ಯಕ್ಷ ಶೋಭಾ ಕುಲಾಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ ಹಾಗೂ ಪ್ರಸನ್ನ ಕುಮಾರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಎಲ್ಲಾ ವಿಕಲಚೇತನರನ್ನು ಗುರುತಿಸಿ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಗ್ರಾಮ ಪಂಚಾಯತಿಯಿಂದ ಸಾಧ್ಯವಾದಷ್ಟು ಮಟ್ಟಿಗೆ ಪೂರೈಸುವಂತಹ ಭರವಸೆ ನೀಡಿದರು ಹಾಗೂ ಸವಲತ್ತುಗಳನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ವಿಕಲಚೇತನರ ಹಕ್ಕು ಎಂದು ತಿಳಿಯಪಡಿಸಿದರು . ಹಾಗೂ ವಿಕಲಚೇತನ ಪರವಾಗಿ ಚೇತನ ಇವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ವಿಆರ್ ಡಬ್ಲ್ಯೂ ವಿನೋದ್ ರವರು ವರದಿಯನ್ನು ವಾಚಿಸಿದರು ರಾಷ್ಟ್ರಗೀತೆಯೊಂದಿಗೆ ಸದ್ರಿ ವಿಕಲಚೇತನರ ಗ್ರಾಮ ಸಭೆಯು ಮುಕ್ತಾಯವಾಯಿತು.













