Home News ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಸಮರ ಸೌಗಂಧಿಕೆ ತಾಳಮದ್ದಳೆ

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ಸಮರ ಸೌಗಂಧಿಕೆ ತಾಳಮದ್ದಳೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ನಾಳ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಪ್ರಯುಕ್ತ ದೇವರು ಅವಭ್ರತ ಸ್ನಾನಕ್ಕೆ ತೆರಳುವ ಪೂರ್ವದಲ್ಲಿ ಊರಿನ ಹವ್ಯಾಸಿ ಕಲಾವಿದರಿಂದ ಕವಿ ಗಣೇಶ್ ಕೊಲಕಾಡಿ ವಿರಚಿತ ಸಮರ ಸೌಗಂಧಿಕೆ ತಾಳಮದ್ದಳೆ ಜರಗಿತು.

ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ, ದೇವಿಪ್ರಸಾದ್ ಗುರುವಾಯನಕೆರೆ ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ಚಂದ್ರಶೇಖರ ಆಚಾರ್ಯ ಗೇರುಕಟ್ಟೆ ಅರ್ಥಧಾರಿಗಳಾಗಿ ಮಧೂರು ಮೋಹನ ಕಲ್ಲೂರಾಯ, ದಿವಾಕರ ಆಚಾರ್ಯ ಗೇರುಕಟ್ಟೆ, ರಾಘವ. ಯಚ್ ಗೇರುಕಟ್ಟೆ, ಶಿವಾನಂದ ಭಂಡಾರಿ ಭಾಗವಹಿಸಿದ್ದರು. ದಿವಾಕರ ಆಚಾರ್ಯ ಗೇರುಕಟ್ಟೆ ಸ್ವಾಗತಿಸಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಘವ ಗೇರುಕಟ್ಟೆ ವಂದಿಸಿದರು.