

ಉರುವಾಲು: ಕಾರಿಂಜ ಶ್ರೀ ವನಶಾಸ್ತಾರ ದೇವಸ್ಥಾನದ ಜೀರ್ಣೋದ್ಧಾರದ ಕೆಲಸಗಳು ಪ್ರಗತಿಯಲ್ಲಿದ್ದು, ಮೆಸ್ಕಾಂ ಇಲಾಖೆಯ ಅಧ್ಯಕ್ಷ ಹರೀಶ್ ಕುಮಾರ್ ಇವರು ಆಗಮಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬ್ರಹ್ಮ ಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಯೋಗೀಶ್ ಪೂಜಾರಿ ಕಡ್ತಿಲ, ಟ್ರಸ್ಟ್ ನ ಅಧ್ಯಕ್ಷರಾದ ಕೊರಗಪ್ಪ ಪೂಜಾರಿ ಕಾರಿಂಜ, ಪದಾಧಿಕಾರಿಗಳಾದ ಗೋಪಾಲ ಕೃಷ್ಣ ಗೌಡ ಅಲೈಮಾರ್, ಓಬಯ್ಯ ಪೂಜಾರಿ ಕಾರಿಂಜ, ಗ್ರಾಮ ಪಂಚಾಯತ್ ಸದಸ್ಯ ಯಶವಂತ ಕಾರಿಂಜ,ವಿನಾಯಕ ಕಾರಿಂಜ, ಧರ್ಣಪ್ಪ ನಾಯ್ಕ ಆನಡ್ಕ, ರತ್ನಾಕರ ಗೌಡ ಖಂಡಿಗ, ಗಣೇಶ ಪೂಜಾರಿ ಕಾರಿಂಜ, ಗಣೇಶ ಪೂಜಾರಿ ನೀನಿ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.













