Home Education ಪಿಯು ಉಪನ್ಯಾಸಕರ ಹುದ್ದೆ ಅರ್ಜಿ ಸಲ್ಲಿಕೆಗೆ ಜ.31 ಕೊನೆ ದಿನ

ಪಿಯು ಉಪನ್ಯಾಸಕರ ಹುದ್ದೆ ಅರ್ಜಿ ಸಲ್ಲಿಕೆಗೆ ಜ.31 ಕೊನೆ ದಿನ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್ -2 ಹುದ್ದೆಯಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರ ಹುದ್ದೆಗೆ ಮುಂಬಡ್ತಿ ನೀಡಲು ಅರ್ಹತಾ ಪರೀಕ್ಷೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಜ.31ರವರೆಗೆ ಕಾಲಾವಕಾಶ ನೀಡಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಜೇಷ್ಠತಾ ಪಟ್ಟಿಯಲ್ಲಿಲ್ಲದ ಹಾಗೂ ಪಿಯು ಉಪನ್ಯಾಸಕರ ಹುದ್ದೆಗೆ ನಿಯಮಾನುಸಾರ ಅರ್ಹವಿದ್ದು, ಅರ್ಜಿ ಸಲ್ಲಿಸಲು ಬಯಸುವ ಸರಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಕೂಡ ಅವಕಾಶ ನೀಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರಿಕೃತ ದಾಖಲೆಗಳ ಘಟಕದ జంటి ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ.ಜಿ.ಐ.ಡಿ. ಸಂಖ್ಯೆಯನ್ನು ತಂತ್ರಾಂಶ ದಲ್ಲಿ ಸಡಿಲಗೊಳಿಸಿ, ಸಹ ಶಿಕ್ಷಕರೇ ತಮ್ಮ ಕೆ.ಜಿ.ಐ.ಡಿ ಸಂಖ್ಯೆಯನ್ನು ನಮೂದಿಸು ವುದರ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸ್ನಾತಕೋತ್ತರ ಅರ್ಹತೆ ಹೊಂದಿರುವ ಹಾಗೂ ಜೇಷ್ಠತಾ ಪಟ್ಟಿಯಲ್ಲಿ ಹೆಸರು ಪ್ರಕಟಿತವಾಗಿರುವವರಿಗೆ ಅರ್ಜಿ ಸಲ್ಲಿಸಲು 2025 ಡಿ 29ರಿಂದ ಜ.28 ರವರೆಗೆ ಕಾಲಾವಕಾಶ ನೀಡಲಾಗಿತ್ತು. ಇಲಾಖಾ ವೆಬ್‌ಸೈಟ್‌ನಲ್ಲಿ ಮುಂಬಡ್ತಿ ಸಂಬಂಧ ಪ್ರಕಟಿತ ಜೇಷ್ಠತಾ ಪಟ್ಟಿಯಲ್ಲಿಲ್ಲದ ಹಾಗೂ ನಿಯಮಾನುಸಾರ ಅರ್ಹರಿರುವ ಕೆಲ ಅರ್ಹ ಸಹ ಶಿಕ್ಷಕರು ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ಕೋರಿದ್ದರು.