

ಬೈಂದೂರು ತಾಲೂಕಿನ ಮಾನ್ಯ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆಯವರ ಪರಿಕಲ್ಪನೆಯಲ್ಲಿ ಆಯೋಜಿಸಲಾದ ಬೈಂದೂರು ಉತ್ಸವ – 2026 ಕಾರ್ಯಕ್ರಮದಲ್ಲಿ ಸೇವಾಭಾರತಿ ತಂಡ ಭಾಗವಹಿಸಿತು. ಉತ್ಸವದ ಅಂಗವಾಗಿ ಸಂಸ್ಥೆಯ ಮಳಿಗೆಯನ್ನು ತೆರೆಯಲಾಗಿದ್ದು, ಸಂಸ್ಥೆಯ ಕರಪತ್ರ, ವಾರ್ಷಿಕ ವರದಿ ಹಂಚಿ, ಸಂಸ್ಥೆಯ ವಿವಿಧ ಯೋಜನೆಗಳ ಸೇವಾ ಕಾರ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು.
ಬೈಂದೂರು ಉತ್ಸವದಲ್ಲಿ ಸಂಸ್ಥೆಯ ಖಜಾಂಚಿ ಹಾಗೂ ಸೇವಾಧಾಮದ ಸಂಸ್ಥಾಪಕರಾದ ಶ್ರೀ ಕೆ. ವಿನಾಯಕ ರಾವ್ ರವರನ್ನು ಗೌರವಿಸಲಾಯಿತು.
ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆಯವರಿಗೆ ಹಾಗೂ ಬೈಂದೂರು ಉತ್ಸವದ ಪದಾಧಿಕಾರಿಗಳಿಗೆ ಸೇವಾಭಾರತಿ ಸಂಸ್ಥೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.













