Home News ಲಾಯಿಲ: ಶ್ರೀ ರಾಘವೇಂದ್ರ ಮಠದ ಗೌರವ ಸಲಹೆಗಾರರಾಗಿ ಸುಮಂತ್ ಕುಮಾ‌ರ್ ಜೈನ್‌ ಆಯ್ಕೆ

ಲಾಯಿಲ: ಶ್ರೀ ರಾಘವೇಂದ್ರ ಮಠದ ಗೌರವ ಸಲಹೆಗಾರರಾಗಿ ಸುಮಂತ್ ಕುಮಾ‌ರ್ ಜೈನ್‌ ಆಯ್ಕೆ

Hindu neighbor gifts plot of land

Hindu neighbour gifts land to Muslim journalist

ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಮಠದ ಟ್ರಸ್ಟಿನ ಸಭೆಯು ಜ.27ರಂದು ಶ್ರೀ ರಾಘವೇಂದ್ರ ಮಂಟಪದಲ್ಲಿ ನಡೆದು ಎಕ್ಸೆಲ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು ಗೌರವ ಸಲಹೆಗಾರರಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ ಸ್ವಾಗತಿಸಿ ಪ್ರಸ್ತಾವಿಸಿದರು. ಕೋಶಾಧಿಕಾರಿ ಶ್ರವಣ್ ಕುಮಾರ್ ಲೆಕ್ಕಪತ್ರಗಳನ್ನು ಮಂಡಿಸಿದರು. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಯಾವುದೇ ಅನಾನುಕೂಲ ಆಗದಂತೆ ಪೂಜಾ ವಿಧಿ ವಿಧಾನಗಳು ಸಮಯ ಶ್ರದ್ದೆ ಮತ್ತು ಶಿಸ್ತುನಿಂದ ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿದೆ, ಫೆ.7ರಂದು ನಡೆಯುವ ಸಾರ್ವಜನಿಕ ಶ್ರೀ ಶನೇಶ್ವರ ಪೂಜೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಬೇಕೆಂದು ಅಧ್ಯಕ್ಷ ಪೀತಾಂಬರ ಹೇರಾಜೆ ಅವರು ತಿಳಿಸಿದರು. ಉಜಿರೆ ಎಸ್. ಡಿ. ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಕುಮಾರ ಹೆಗಡೆಯವರನ್ನು ಟ್ರಸ್ಟಿಗೆ ನೂತನವಾಗಿ ಸೇರಿಸಲಾಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಹಿರಿಯ ಟ್ರಸ್ಟಿಗಳಾದ ಪ್ರೊ ಎ. ಕೃಷ್ಣಪ್ಪ ಪೂಜಾರಿ, ಶ್ರೀ ಸೋಮೇಗೌಡ, ಉಮಾ ರಂಜನ್ ರಾವ್, ಮಂಜುನಾಥ ರೈ, ಕೃಷ್ಣ ಶೆಟ್ಟಿ ಹಾಗೂ ಇತರ ಪ್ರಮುಖರು ಹಾಜರಿದ್ದರು.