Home News Ranya Rao: ರನ್ಯಾರಾವ್ ಗ್ಲೋಲ್ಡ್ ಸ್ಮಗ್ಲಿಂಗ್ ಕೇಸ್ : ವಿಚಾರಣೆಗೆ ಡಿಜಿಪಿ ರಾಮಚಂದ್ರರಾವ್‌ಗೆ ನೋಟಿಸ್

Ranya Rao: ರನ್ಯಾರಾವ್ ಗ್ಲೋಲ್ಡ್ ಸ್ಮಗ್ಲಿಂಗ್ ಕೇಸ್ : ವಿಚಾರಣೆಗೆ ಡಿಜಿಪಿ ರಾಮಚಂದ್ರರಾವ್‌ಗೆ ನೋಟಿಸ್

Hindu neighbor gifts plot of land

Hindu neighbour gifts land to Muslim journalist

 Ranya Rao: ಸ್ಯಾಂಡಲ್‌ವುಡ್ ನಟಿ ರನ್ಯಾರಾವ್ (Ranya Rao) ಗ್ಲೋಲ್ಡ್ ಸ್ಮಗ್ಲಿಂಗ್ ಕೇಸ್‌ಲ್ಲಿ (Gold Smuggling Case) ಇದೀಗ ಡಿಜಿಪಿ ರಾಮಚಂದ್ರರಾವ್‌ಗೆ (Ramchandra Rao) ನೋಟಿಸ್ ನೀಡಿದ್ದಾರೆ.

ರಾಸಲೀಲೆ ಪ್ರಕರಣದ ಬೆನ್ನಲ್ಲೇ ಇದೀಗ ರನ್ಯಾರಾವ್ ಗ್ಲೋಲ್ಡ್ ಸ್ಮಗ್ಲಿಂಗ್ ಕೇಸ್‌ಲ್ಲಿ ವಿಚಾರಣೆಗೆ ಹಾಜರಾಗುವಂತೆ ಡಿಜಿಪಿ ರಾಮಚಂದ್ರರಾವ್‌ಗೆ ನೋಟಿಸ್ ನೀಡಿದ್ದಾರೆ. ಇನ್ನೂ ಈಗಾಗಲೇ ರಾಸಲೀಲೆ ಪ್ರಕರಣವನ್ನು ಇಲಾಖಾ ತನಿಖೆಗೆ ಆದೇಶಿಸಿ ಪೊಲೀಸ್ ಮಹಾನಿರ್ದೇಶಕ ಸಲೀಂ ಅವರು ಆದೇಶ ಹೊರಡಿಸಿದ್ದಾರೆ. ಐಜಿಪಿಯಾಗಿದ್ದಾಗ ಕಚೇರಿಯಲ್ಲಿ ಸಮವಸ್ತ್ರದಲ್ಲಿಯೇ ರಾಸಲೀಲೆ ನಡೆಸಿದ್ದ ಕಾರಣ ಇಲಾಖೆ ತನಿಖೆಗೆ ಆದೇಶಿಸಿದ್ದರು.

ಇದಕ್ಕೂ ಮುನ್ನ ರಾಮಚಂದ್ರರಾವ್ ಅವರಿಗೆ ನೋಟಿಸ್ ಮಾಡಿದ್ದ ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಮ್ಯಾರಥಾನ್ ವಿಚಾರಣೆ ಮಾಡಿದ ಡಿಆರ್‌ಐ ಅಧಿಕಾರಿಗಳು ರನ್ಯಾರಾವ್‌ಗೆ ಮತ್ತು ರಾಮಚಂದ್ರರಾವ್‌ಗೆ ಇರೋ ಸಂಬಂಧ, ಚಿನ್ನ ಸಾಗಾಟ ಮಾಡೋ ಸಂದರ್ಭದಲ್ಲಿ ಸಹಾಯ ಮಾಡಲಾಗಿತ್ತಾ? ಪ್ರೋಟೋ ಕಾಲ್ ದುರ್ಬಳಕೆ ಮಾಡಿಕೊಂಡಿದ್ದರ ಬಗ್ಗೆ, ಜೊತೆಗೆ ಎರಡೇ ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದ ವಿಚಾರವನ್ನು ಸವಿವರವಾಗಿ ವಿಚಾರಣೆ ನಡೆಸಿದ್ದರು.