Home News ರಾಸಲೀಲೆ ಆರೋಪ ತಳ್ಳಿ ಹಾಕಿದ ಐಜಿಪಿ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ!

ರಾಸಲೀಲೆ ಆರೋಪ ತಳ್ಳಿ ಹಾಕಿದ ಐಜಿಪಿ, ನನ್ನ ವಿರುದ್ಧ ದೊಡ್ಡ ಷಡ್ಯಂತ್ರ!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ಸಮವಸ್ತ್ರದಲ್ಲಿಯೇ ಮಹಿಳೆಯರ ಜೊತೆ ಸರಸವಾಡಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಐಜಿಪಿ ರಾಮಚಂದ್ರ ರಾವ್‌ ಅವರು ಮಾಧ್ಯಮಗಳ ಮುಂದೆ ಬಂದು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದು, ಇದು ನನ್ನ ತೇಜೋವಧೆ ಮಾಡಲು ನಡೆಸಿರುವ ವ್ಯವಸ್ಥಿತ ಷಡ್ಯಂತ್ರ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿರುವುದು ನೀವೇ ಅಲ್ಲವೇ? ಸಮವಸ್ತ್ರದಲ್ಲೇ ಇಂತಹ ವರ್ತನೆ ಸರಿಯೇ? ಎನ್ನುವ ಮಾಧ್ಯಮದವರ ನೇರ ಪ್ರಶ್ನೆಗಳಿಗೆ ಉತ್ತರಿಸದೆ ರಾಮಚಂದ್ರ ರಾವ್‌ ಕಕ್ಕಾಬಿಕ್ಕಿಯಾಗಿ ನಿರ್ಗಮಿಸಿರುವ ಘಟನೆ ನಡೆದಿದೆ.

ಒಂದು ಕಡೆ ವಿಡಿಎಯೋ ಎಡಿಟೆಡ್‌ ಎಂದು ರಾಮಚಂದ್ರ ರಾವ್‌ ಹೇಳುತ್ತಿದ್ದರೆ, ಇನ್ನೊಂದೆಡೆ ವಿಡಿಯೋದಲ್ಲಿ ಕಾಣುವ ದೃಶ್ಯಗಳು ಮತ್ತು ಸ್ಥಳವು ಅವರ ಕಚೇರಿಯನ್ನೇ ಹೋಲುತ್ತಿದೆ. ಹೀಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ವಿಡಿಯೋವನ್ನು ಕಳುಹಿಸಿ ಸಮಗ್ರ ತನಿಖೆ ನಡೆಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.