Home Jobs 323 ಸಹಾಯಕ ಕೋಚ್‌ಗಳ ಹುದ್ದೆಗೆ ಸಾಯ್ ಅರ್ಜಿ ಆಹ್ವಾನ

323 ಸಹಾಯಕ ಕೋಚ್‌ಗಳ ಹುದ್ದೆಗೆ ಸಾಯ್ ಅರ್ಜಿ ಆಹ್ವಾನ

Hindu neighbor gifts plot of land

Hindu neighbour gifts land to Muslim journalist

ಹೊಸದಿಲ್ಲಿ: ಕ್ರೀಡಾಪಟುಗಳಿಗೆ ಹೆಚ್ಚಿನ ಬೆಂಬಲ ಮತ್ತು ತರಬೇತಿ ನೀಡುವ ಉದ್ದೇಶದಿಂದ ಭಾರತೀಯ ಕ್ರೀಡಾ ಪ್ರಾಧಿಕಾರವು (ಸಾಯ್), 26 ವಿವಿಧ ಕ್ರೀಡಾ ವಿಭಾಗಗಳಲ್ಲಿ ಸಹಾಯಕ ಕೋಚ್‌ಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ತನ್ನ ಉತ್ಕೃಷ್ಟತಾ ಕೇಂದ್ರಗಳು (ಸೆಂಟರ್ ಆಫ್ ಎಕ್ಸಲೆನ್ಸ್) ಮತ್ತು ಇತರ ತರಬೇತಿ ಕೇಂದ್ರಗಳಿಗಾಗಿ ಶೂಟಿಂಗ್, ಅಥ್ಲೆಟಿಕ್ಸ್, ಈಜು ಮತ್ತು ಕುಸ್ತಿ ವಿಭಾಗಗಳು ಈ ನೇಮಕಾತಿ ಯಿಂದ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಲಿವೆ. ದೇಶಾದ್ಯಂತ ಇರುವ ವಿವಿಧ ಪ್ರಾದೇಶಿಕ

ನೇಮಕಾತಿಯು ಕೇಂದ್ರಗಳು, ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಒಟ್ಟು 323 ಸಹಾಯಕ ಕೋಚ್‌ಗಳ ಹುದ್ದೆಗಳು ಖಾಲಿ ಇದ್ದು ಅದಕ್ಕಾಗಿ ಸಾಯ್ ಅರ್ಜಿ ಆಹ್ವಾನಿಸಿದೆ. ಈ ಪೈಕಿ ಶೇ.33ರಷ್ಟು ಹುದ್ದೆಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ಕಂಪ್ಯೂಟರ್ ಆಧಾರಿತ ಆನ್‌ಲೈನ್ ಲಿಖಿತ ಪರೀಕ್ಷೆ (CBT) ಮತ್ತು ಕೋಚಿಂಗ್ ಸಾಮರ್ಥ್ಯ ಪರೀಕ್ಷೆ (CAT) ಒಳಗೊಂಡಂತೆ ಎರಡು ಹಂತಗಳಲ್ಲಿ ನಡೆಯಲಿದೆ ಎಂದು ಪ್ರಾಧಿಕಾರವು ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.