Home News ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಕೇಸು: ರಾಜೀವ್‌ ಗೌಡ ರಾಜಿಗೆ ಯತ್ನ?

ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಕೇಸು: ರಾಜೀವ್‌ ಗೌಡ ರಾಜಿಗೆ ಯತ್ನ?

Hindu neighbor gifts plot of land

Hindu neighbour gifts land to Muslim journalist

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಜಿ. ಅವರಿಗೆ ಕಾಂಗ್ರೆಸ್‌ ಮುಖಂಡ ರಾಜೀವ್‌ ಗೌಡ ಬೆದರಿಕೆ ಹಾಕಿದ ವಿಚಾರ ಸುದ್ದಿಯಾಗಿದ್ದು, ಇದೀಗ ರಾಜೀ ಸಂಧಾನದ ಯತ್ನ ನಡೆದಿರುವ ವಿಷಯ ಬಹಿರಂಗ ಗೊಂಡಿದೆ.

ಪೌರಾಯುಕ್ತೆ ಅಮೃತಾ ಅವರ ತಂದೆಗೆ ರಾಜೀವ್‌ ಗೌಡ ಕಡೆಯಿಂದ ಕರೆ ಬಂದಿತ್ತು ಎನ್ನಲಾಗಿದ್ದು, ಈ ಕುರಿತು ಅಮೃತಾ ಅವರು ಮಾಹಿತಿ ನೀಡಿದ್ದಾರೆ. ನಾವು ನಿರ್ಧಾರ ಮಾಡುವುದಿಲ್ಲ. ನಮ್ಮ ಮಗಳಿಗೆ ಸಂಬಂಧಿಸಿದ ವಿಷಯ ಎಂದು ಈ ವೇಳೆ ನಮ್ಮ ತಂದೆ ತಿಳಿಸಿದ್ದಾರೆ ಎಂದು ಪೌರಾಯುಕ್ತೆಯೇ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇನ್ನು ಘಟನೆ ನಡೆದ ಬಳಿಕ ಪೌರಾಯುಕ್ತೆ ಅಮೃತಾ ಅವರು ತಮ್ಮ ಕರ್ತವ್ಯಗಳನ್ನು ಯಾವುದೇ ಆತಂಕವಿಲ್ಲದೆ ಎಂದಿನಂತೆ ನಿರ್ವಹಣೆ ಮಾಡುತ್ತಿದ್ದಾರೆ. ಅಕ್ರಮವಾಗಿ ಅಳವಡಿಸಲಾಗಿರುವ ಫ್ಲೆಕ್ಸ್‌ ಬೋರ್ಡ್‌ಗಳನ್ನು ತಮ್ಮ ಸಿಬ್ಬಂದಿಗಳ ಜೊತೆ ತೆರವುಗೊಳಿಸುವ ಕೆಲಸ ಮುಂದುವರಿಸಿದ್ದಾರೆ.