Home News ವಕ್ಫ್‌ನಿಂದ ಮೂರು ಮಸೀದಿಗಳಿಗೆ ಒಟ್ಟು 50 ಲಕ್ಷ ರೂ. ಅನುದಾನ ಬಿಡುಗಡೆ: ಶಾಸಕ ಅಶೋಕ್‌ ರೈ

ವಕ್ಫ್‌ನಿಂದ ಮೂರು ಮಸೀದಿಗಳಿಗೆ ಒಟ್ಟು 50 ಲಕ್ಷ ರೂ. ಅನುದಾನ ಬಿಡುಗಡೆ: ಶಾಸಕ ಅಶೋಕ್‌ ರೈ

Hindu neighbor gifts plot of land

Hindu neighbour gifts land to Muslim journalist

ಪುತ್ತೂರು: ಕರ್ನಾಟಕ ರಾಜ್ಯ ವಕ್ಫ್‌ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಮೂರು ಮಸೀದಿಗಳಿಗೆ ಒಟ್ಟು 50 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್‌ ರೈ ತಿಳಿಸಿರುವ ಕುರಿತು ವರದಿಯಾಗಿದೆ.

ವಕ್ಫ್‌ ಅಧೀನದಲ್ಲಿರುವ ಮಸೀದಿಯ ನವೀಕರಣ, ದುರಸ್ತಿ, ಜೀರ್ಣೋದ್ಧಾರಕ್ಕೆ ಈ ಅನುದಾನ ಬಿಡುಗಡೆಯಾಗಿರುತ್ತದೆ.

ಬೆಟ್ಟಂಪಾಡಿ ಗ್ರಾಮದ ರೆಂಜ ಫಾರೂಕ್‌ ಜುಮಾ ಮಸೀದಿ ಮತ್ತು ಖುವ್ವತ್ತುಲ್‌ ಇಸ್ಲಾಂ ಮದ್ರಸ ಇದರ ಅಭಿವೃದ್ಧಿ ಕೆಲಸಕ್ಕೆ 20 ಲಕ್ಷ ರೂ, ಬಜತ್ತೂರು ಗ್ರಾಮದ ಮುಹಿಯುದ್ದೀನ್‌ ಜುಮಾ ಮಸೀದಿ ಹಳೆನೇರಂಕಿ ಇದರ ದುರಸ್ಥಿ ಮತ್ತು ನವೀಕರಣಕ್ಕೆ 15 ಲಕ್ಷ ರೂ, ಶಾಂತಿಗೋಡು ಗ್ರಾಮದ ವೀರಮಂಗಲ ಬದ್ರಿಯಾ ಜುಮಾ ಮಸೀದಿ ಇದರ ದುರಸ್ತಿಗೆ 15 ಲಕ್ಷ ಅನುದಾನ ಬಿಡುಗಡೆಯಾಗಿದೆ.

ಶಾಸಕ ಅಶೋಕ್‌ ರೈ ಶಿಫಾರಸ್ಸಿನ ಪ್ರಕಾರ ವಕ್ಫ್‌ ಇಲಾಖೆಯಿಂದ ಈ ಅನುದಾನ ಬಿಡುಗಡೆಯಾಗಿದೆ.