Home latest Namma Metro: ಇನ್ಮುಂದೆ 1,3, 5 ದಿನದ ಪಾಸ್ ಸೌಲಭ್ಯ – ಹೀಗೆ ಮಾಡಿದ್ರೆ 50...

Namma Metro: ಇನ್ಮುಂದೆ 1,3, 5 ದಿನದ ಪಾಸ್ ಸೌಲಭ್ಯ – ಹೀಗೆ ಮಾಡಿದ್ರೆ 50 ರೂಪಾಯಿ ಉಳಿತಾಯ!!

Hindu neighbor gifts plot of land

Hindu neighbour gifts land to Muslim journalist

Namma Metro : ಸಂಕ್ರಾಂತಿ ಹಬ್ಬದ ಹೊತ್ತಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೊಸ ಸಿಹಿ ಸುದ್ದಿ ಸಿಕ್ಕಿದ್ದು, BMRCL ದಿನದ ಪಾಸ್, 3 ದಿನದ ಪಾಸ್ ಮತ್ತು 5 ದಿನದ ಪಾಸ್ ಗಳನ್ನು ಪರಿಚಯಿಸಿದೆ.

ಹೌದು, ಒತ್ತಾಯ, ಮನವಿ ಬಳಿಕ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕ್ಯೂಆರ್ ಕೋಡ್ ಆಧಾರಿತ (QR) ಮೆಟ್ರೋ ಅನಿಯಮಿತ ಸಂಚಾರದ ಪಾಸ್‌ಗಳನ್ನು ವಿತರಣೆ ವ್ಯವಸ್ಥೆ ಪರಿಚಯಿಸುತ್ತಿದ್ದು, ಪ್ರಯಾಣಿಕರು ಜನವರಿ 15ರಿಂದ ಪಾಸ್ ಪಡೆಯಬಹುದಾಗಿದೆ. ಇದನ್ನು ಪಡೆಯುವುದು? ಹೇಗೆ ಎಷ್ಟು ಹಣ ಉಳಿತಾಯವಾಗುತ್ತದೆ? ಎಂದು ನೋಡೋಣ ಬನ್ನಿ

ಏನಿದು ಹೊಸ ಪಾಸ್ ವ್ಯವಸ್ಥೆ?

ಅನಿಯಮಿತ ಓಡಾಟದ ಪಾಸ್ ನಮ್ಮ ಮೆಟ್ರೋದಲ್ಲಿ ಈಗಾಗಲೇ ಚಾಲ್ತಿಯಲ್ಲಿತ್ತು. ಆದರೆ ಇದನ್ನು ಮೊದಲು ನಿಲ್ದಾಣಗಳಲ್ಲಿಯೇ ತೆಗೆದುಕೊಳ್ಳಬೇಕಿತ್ತು. ಆದರೆ, ಇದೀಗ ಹೊಸ ಯೋಜನೆಯಲ್ಲಿ ಅನಿಯಮಿತ ಓಡಾಟದ ಪಾಸ್ ಅನ್ನು ಮೊಬೈಲ್​ ಮೂಲಕವೇ ಖರೀದಿಸಬಹುದು. ಇನ್ಮೇಲೆ ಅನಿಯಮಿತ ಓಡಾಟದ ಪಾಸ್ ಅನ್ನು ಮೊಬೈಲ್​ ಮೂಲಕವೇ ಖರೀದಿಸಬಹುದಾಗಿದ್ದು, ಅದು ಕ್ಯೂಆರ್ ಆಧಾರಿತವಾಗಿದೆ. ಇನ್ನು, 1, 3 & 5 ದಿನದ ಈ ಪಾಸ್​ನಲ್ಲಿ, ನೀವು, 50 ರೂಪಾಯಿ ಹಣವನ್ನ ಉಳಿಸಬಹುದಾಗಿದೆ.

ಹೊಸ ದರ ಎಷ್ಟಿರಲಿದೆ?

* ಒಂದೇ ದಿನಕ್ಕೆ 250 ರೂಪಾಯಿ ಪಾವತಿ ಮಾಡಬೇಕು

*ದಿನಕ್ಕೆ 550 ರೂಪಾಯಿ ಪಾವತಿ ಮಾಡಬೇಕು5

* ದಿನ ಓಡಾಟ ಮಾಡೋಕೆ 850 ರೂಪಾಯಿ ಪಾವತಿ ಮಾಡಬೇಕು

ಈ ಮೂರು ತರಹದ ಪಾಸ್​ ಅನ್ನು ನಿಲ್ದಾಣದಲ್ಲಿಯೇ ತೆಗೆದುಕೊಂಡರೆ 50 ರೂಪಾಯಿ ಹೆಚ್ಚಳವಾಗಿ ಅಂದ್ರೆ ಸ್ಮಾರ್ಟ್​ ಕಾರ್ಡ್​ ದರವನ್ನ ನೀಡಬೇಕಾಗುತ್ತದೆ.