Home News ಶಬರಿಮಲೆ ತಂತ್ರಿ ರಾಜೀವರ್ ಅಸ್ವಸ್ಥ

ಶಬರಿಮಲೆ ತಂತ್ರಿ ರಾಜೀವರ್ ಅಸ್ವಸ್ಥ

Image Credit: Kerala Kaumudi

Hindu neighbor gifts plot of land

Hindu neighbour gifts land to Muslim journalist

ತಿರುವನಂತಪುರ: ಶಬರಿಮಲೆ ಚಿನ್ನಲೂಟಿ ಪ್ರಕರಣದಲ್ಲಿ ಬಂಧಿತರಾದ ಶಬರಿಮಲೆಯ ಹಿರಿಯ ತಂತ್ರಿ ಕಂಠರರ್ ರಾಜೀವರ್ ಶನಿವಾರ ಬೆಳಗ್ಗೆ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ತಿರುವನಂತಪುರ ಕಾಲೇಜಜಿನ ಮೆಡಿಕಲ್ ಐಸಿಯುಗೆ ದಾಖಲಿಸಲಾಗಿದೆ. ಶುಕ್ರವಾರ ರಾತ್ರಿ ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯದ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ಹಿನ್ನೆಲೆಯಲ್ಲಿ ತಂತ್ರಿಗಳನ್ನು ತಿರುವನಂತಪುರದ ವಿಶೇಷ ಸಬ್ ಜೈಲ್‌ಗೆ ಹಾಕಲಾಗಿತ್ತು. ಶನಿವಾರ ಅಸ್ವಸ್ಥಗೊಂಡ ಅವರನ್ನು ಜೈಲಿನ ಆಂಬ್ಯುಲೆನ್ಸ್‌ನಲ್ಲಿ ತಿರುವನಂತಪುರದ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿ, ವೈದ್ಯರ ಶಿಫಾರಸಿನ ಮೇರೆಗೆ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿದೆ.

ತಂತ್ರಿ ಮನೆಯಲ್ಲಿ ಎಸ್‌ಐಟಿ

ಶೋಧ: ತಂತ್ರಿಗಳ ಚೆಂಗನ್ನೂರಿನ ಮನೆಯಲ್ಲಿಡಿವೈಎಸ್ಪಿಸುರೇಶ್ ಬಾಬು ನೇತೃತ್ವದಲ್ಲಿ 8 ಸದಸ್ಯರ ತಂಡ ಶೋಧ ನಡೆಸಿದೆ. ಅಕ್ಕಸಾಲಿಗ, ಛಾಯಾಗ್ರಾಹಕ ಮತ್ತು ವಿಧಿವಿಜ್ಞಾನ ತಜ್ಞರು ಜತೆಗಿದ್ದರು. ತಪಾಸಣೆ ವೇಳೆ ಮನೆಗೆ ಆಗಮಿಸಿದ ತಂತ್ರಿಗಳ ಸೊಸೆಯನ್ನು ಮನೆಗೆ ಪ್ರವೇಶಿಸಲು ಬಿಟ್ಟಿಲ್ಲ. ಮನೆಯಲ್ಲಿದ್ದ ಸಂಬಂಧಿಕರನ್ನು ಹೊರ ಹೋಗುವಂತೆ ಸೂಚಿಸಲಾಗಿದೆ.