Home News ಸಿಂಗಾಪುರ ಸೇನೆಯಲ್ಲಿ ಲಾಲು ಮೊಮ್ಮಗ ತರಬೇತಿ

ಸಿಂಗಾಪುರ ಸೇನೆಯಲ್ಲಿ ಲಾಲು ಮೊಮ್ಮಗ ತರಬೇತಿ

Hindu neighbor gifts plot of land

Hindu neighbour gifts land to Muslim journalist

ಪಟನಾ: ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಮೊಮ್ಮಗ ಆದಿತ್ಯ ಆಚಾರ್ಯ ಸೇನಾ ತರಬೇತಿ ಆರಂಭಿಸಿದ್ದಾರೆ. ಆದರೆ ಅವರು ಭಾರತೀಯ ಸೇನೆಯನ್ನಲ್ಲ, ಬದಲಿಗೆ ಸಿಂಗಾಪುರ ಸೇನೆಯಲ್ಲಿ ಮುಂದಿನ ದಿನಗಳಲ್ಲಿ ಸೇವೆ ಸಲ್ಲಿಸಲಿದ್ದಾರೆ. ತಮ್ಮ ಪುತ್ರ ಸೇನಾ ತರಬೇತಿ ಆರಂಭಿಸಿದ ವಿಷಯವನ್ನು ಲಾಲು ಪುತ್ರಿ ರೋಹಿಣಿ ಆಚಾರ್ಯ ಅವರು ‘ಎಕ್ಸ್’ನಲ್ಲಿ ಹೊರಹಾಕಿದ್ದಾರೆ.

“ನನಗೆ ಇಂದು ಹೆಮ್ಮೆಯ ಕ್ಷಣವಾಗಿದೆ. ಹಿರಿಯ ಪುತ್ರ ಆದಿತ್ಯ ಪಿಯುಸಿ ವ್ಯಾಸಂಗ ಪೂರ್ಣಗೊಳಿಸಿ ಈಗ 2 ವರ್ಷಗಳ ಬೇಸಿಕ್ ಮಿಲಿಟರಿ ಟ್ರೇನಿಂಗ್‌ಗೆ ಹೊರಟಿದ್ದಾನೆ. ಸೇನಾ ತರಬೇತಿಯು ಅತ್ಯಂತ ಕಠಿಣಮಯವಾಗಿರುತ್ತದೆ. ಧೈರ್ಯ ಮತ್ತು ಶಿಸ್ತು ಕಾಪಾಡಲಿದೆ. ನಮ್ಮೆಲ್ಲರ ಪ್ರೋತ್ಸಾಹ, ಪ್ರೀತಿ ನಿನ್ನೊಂದಿಗೆ ಸದಾ ಇರಲಿದೆ,'” ಎಂದು ಮಗನ ಸಾಧನೆ ಬಗ್ಗೆ ರೋಹಿಣಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.