Home News Beedar: KDP ಸಭೆಯಲ್ಲಿ ಸಚಿವರೆದುರು ಚಿಕ್ಕ ಮಕ್ಕಳಂತೆ ಬಡಿದಾಡಿಕೊಂಡ ಬಿಜೆಪಿ,  ಕಾಂಗ್ರೆಸ್ ಶಾಸಕರು!!

Beedar: KDP ಸಭೆಯಲ್ಲಿ ಸಚಿವರೆದುರು ಚಿಕ್ಕ ಮಕ್ಕಳಂತೆ ಬಡಿದಾಡಿಕೊಂಡ ಬಿಜೆಪಿ,  ಕಾಂಗ್ರೆಸ್ ಶಾಸಕರು!!

Hindu neighbor gifts plot of land

Hindu neighbour gifts land to Muslim journalist

Beedar: ಬೀದರ್ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಹಾಗೂ ವಿಧಾನ ಪರಿಷತ್‌ ಸದಸ್ಯ ಪರಸ್ಪರ ನಿಂದಿಸಿಕೊಂಡು ಕೈ ಕೈ ಮಿಲಾಯಿಸಿರುವ ಘಟನೆ ನಡೆದಿದೆ. 

ಹೌದು, ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯಲ್ಲಿ ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ್ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಅವರು ಪರಸ್ಪರ ಕೈ ಕೈ ಮಿಲಾಯಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡರು.

ಸಭೆ ನಡೆಯುತ್ತಿರುವ ವೇಳೆ ಮಾತನಾಡಿದ ಶಾಸಕ ಸಿದ್ದು ಪಾಟೀಲ್, ಹುಮ್ನಾಬಾದ್​​ನಲ್ಲಿ ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಚಿವ ಈಶ್ವರ್​ ಖಂಡ್ರೆಗೆ ಹೇಳಿದ್ದಾರೆ. ಇದರಿಂದ ಕೆರಳಿದ ಭೀಮರಾವ್ ಪಾಟೀಲ್ ಅದನ್ನ ಕೇಳಲು ನೀನ್ಯಾರು? ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ. ಬಳಿಕ ಇಬ್ಬರು ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಇದರಿಂದ ಹುಮನಾಬಾದ್ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. 

ಇನ್ನೂ ಸಚಿವ ಈಶ್ವರ್ ಖಂಡೆ ಮುಂದೆಯೇ ಇಬ್ಬರು ನಾಯಕರು ಗುದ್ದಾಡಿದ್ದು, ಜನರಿಗೆ ಬುದ್ದಿ ಹೇಳುವ ನಾಯಕರೇ ತಾಳ್ಮೆ ಕಳೆದುಕೊಂಡಂತಾಗಿದೆ. ಅಭಿವೃದ್ಧಿ ವಿಚಾರದ ಬಗ್ಗೆ ನಡೆಯಬೇಕಿದ್ದ ಚರ್ಚೆಗಳು ಗಲಾಟೆಯಲ್ಲಿ ಕೊನೆಯಾಗಿದೆ. ಇಬ್ಬರ ನಾಯಕ ವರ್ತನೆ ಬಗ್ಗೆ ಸಚಿವರು ಕೂಡ ಬೇಸರ ಹೊರಹಾಕಿದ್ದಾರೆ. ಇಬ್ಬರು ನಾಯಕರಿಗೆ ಬುದ್ದಿ ಮಾತು ಹೇಳಿದ್ದಾರೆ.

https://www.instagram.com/reel/DTIBw4njKR2/?igsh=azFxYm12dnc1Y3Vj