Home Karnataka State Politics Updates Pratap Simha : ಕೇಂದ್ರ ಬಿಟ್ಟು ರಾಜ್ಯ ರಾಜಕಾರಣಕ್ಕೆ ಪ್ರತಾಪ್ ಸಿಂಹ ಎಂಟ್ರಿ- ವಿಧಾನಸಭಾ ಕ್ಷೇತ್ರ...

Pratap Simha : ಕೇಂದ್ರ ಬಿಟ್ಟು ರಾಜ್ಯ ರಾಜಕಾರಣಕ್ಕೆ ಪ್ರತಾಪ್ ಸಿಂಹ ಎಂಟ್ರಿ- ವಿಧಾನಸಭಾ ಕ್ಷೇತ್ರ ಘೋಷಣೆ

Hindu neighbor gifts plot of land

Hindu neighbour gifts land to Muslim journalist

Pratap Simha : ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಹಾಗೂ ಬಿಜೆಪಿಯಲ್ಲಿ ತನ್ನ ಮಾತಿನ ಮುಖಾಂತರವೇ ಗುರುತಿಸಿಕೊಂಡು ಆಗಾಗ ಸುದ್ದಿಯಾಗುವ ಯುವ ನಾಯಕ ಪ್ರತಾಪ್ ಸಿಂಹ ಅವರು ಇದೀಗ ಕೇಂದ್ರ ರಾಜ್ಯಕಾರಣವನ್ನು ಬಿಟ್ಟು ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದಾರೆ. ಅಷ್ಟೇ ಅಲ್ಲ ಅವರು ತಮ್ಮ ವಿಧಾನಸಭಾ ಕ್ಷೇತ್ರವನ್ನು ಕೂಡ ಆರಿಸಿಕೊಂಡಿದ್ದಾರೆ.

ಹೌದು, ಮಾಜಿ ಸಂಸದ ಪ್ರತಾಪ್ ಸಿಂಹ (Prathap simha) ಬಿಗ್ ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಎರಡು ಬಾರಿ ಎಂಪಿ ಯಾಗಿ ಜನಾಭಿಮಾನ ಗಿಟ್ಟಿಸಿದ್ದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ (State Politics) ಎಂಟ್ರಿ ಕೊಟ್ಟಿದ್ದಾರೆ. ಸಹಜವಾಗಿಯೇ ನಾನು ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ. ಕೇಂದ್ರದ ರಾಜಕಾರಣ ಮುಗಿದ ಮೇಲೆ ರಾಜ್ಯಕ್ಕೆ ಬರಲೇಬೇಕು ತಾನೆ?’ ಎಲ್ಲಾ ದೃಷ್ಟಿಯಿಂದಲೂ ಚಾಮರಾಜ ವಿಧಾನಸಭಾ ಕ್ಷೇತ್ರ ನನಗೆ ಅನುಕೂಲಕರವಾಗಿದೆ. ಹೀಗಾಗಿ ಅದೇ ನನ್ನ ಆಯ್ಕೆಯಾಗಿರುತ್ತದೆ‌. ಈ ಹಿಂದೆ ಎಚ್‌.ಎಸ್.ಶಂಕರಲಿಂಗೇಗೌಡ ಅವರು ನಾಲ್ಕು ಬಾರಿ ಈ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದಿದ್ದರು. ಇದು ಬಿಜೆಪಿ ಕ್ಷೇತ್ರ. ಹೀಗಾಗಿ ಇಲ್ಲಿಂದಲೇ ಚಟುವಟಿಕೆ ಆರಂಭಿಸಿದ್ದೇನೆ’ ಎಂದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮೈಸೂರು ನಗರದ ಚಾಮರಾಜ ವಿಧಾನಸಭಾ ಕ್ಷೇತ್ರವನ್ನು ಪ್ರತಾಪ್ ಸಿಂಹ ತಮ್ಮ ಕರ್ಮಭೂಮಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಒಕ್ಕಲಿಗರ ಪ್ರಾಬಲ್ಯ ಹೊಂದಿರುವ ವಿಧಾನಸಭಾ ಕ್ಷೇತ್ರ ಇದಾಗಿದ್ದು, ಮುಂದಿನ ಚುನಾವಣೆಗೆ ಇಲ್ಲಿಂದಲೇ ಸ್ಪರ್ಧಿಸಲು ಪ್ರತಾಪ್ ಸಿಂಹ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಅಂದಹಾಗೆ ಮೈಸೂರು ನಗರದ ವ್ಯಾಪ್ತಿಯ ಚಾಮರಾಜ ವಿಧಾನಸಭೆ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರತಾಪ್ ಸಿಂಹ ಸಾಕಷ್ಟು ಸಂಚಾರ ಮಾಡುತ್ತಿದ್ದರು. ಇದೀಗ ಪ್ರತಾಪ್ ಸಿಂಹ ಸ್ನೇಹ ಬಳಗದ ಹೆಸರಿನಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದೆ.ಕ್ಯಾಲೆಂಡರ್ ನಲ್ಲಿ ಪ್ರಧಾನಿ ನರೇಂದ್ರಮೋದಿ ಫೋಟೊ ಜೊತೆಗೆ ಪ್ರತಾಪ್ ಸಿಂಹ ಫೋಟೊ ಮತ್ತು ಬಿಜೆಪಿ ಸಿಂಬಲ್ ಮಾತ್ರ ಬಳಕೆ ಮಾಡ್ಲಾಗಿದೆ. ಕ್ಯಾಲೆಂಡರ್ ನ ಪ್ರತಿ ಹಾಳೆಯಲ್ಲಿ ಈ ಹಿಂದೆ ಮೈಸೂರು-ಕೊಡಗು ಸಂಸದರಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಫೋಟೊಗಳು ಬಳಕೆ ಮಾಡಲಾಗಿದ್ದು,ಒಕ್ಕಲಿಗರ ಪ್ರಾಬಲ್ಯದ ಚಾಮರಾಜ ವಿಧಾನಸಭೆ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡಿರೋದು ಕುತೂಹಲ ಕೆರಳಿಸಿದೆ.