Home Karnataka State Politics Updates Davangere : ಶಾಮನೂರು ಶಿವಶಂಕರಪ್ಪ ಸಾವಿನಿಂದ ತೆರವಾದ ಶಾಸಕ ಸ್ಥಾನ – ಉಪ ಚುನಾವಣೆಗೆ ಬಿಜೆಪಿಯ...

Davangere : ಶಾಮನೂರು ಶಿವಶಂಕರಪ್ಪ ಸಾವಿನಿಂದ ತೆರವಾದ ಶಾಸಕ ಸ್ಥಾನ – ಉಪ ಚುನಾವಣೆಗೆ ಬಿಜೆಪಿಯ 4 ಸಂಭಾವ್ಯರ ಪಟ್ಟಿ ರಿಲೀಸ್ 

Hindu neighbor gifts plot of land

Hindu neighbour gifts land to Muslim journalist

Davangere : ದೇಶದ ಹಿರಿಯ ಶಾಸಕ, ರಾಜಕೀಯ ಮುತ್ಸದ್ದಿ ಶಾಮನೂರು ಶಿವಶಂಕರಪ್ಪ ಅವರ ಸಾವಿನಿಂದ ದಾವಣಗೆರೆಯ ವಿಧಾನಸಭಾ ಶಾಸಕ ಸ್ಥಾನ ಇದೀಗ ತೆರವಾಗಿದೆ. ಈ ಹಿನ್ನಲೆಯಲ್ಲಿ ಸದ್ಯದಲ್ಲೇ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಇದೀಗ ಬಿಜೆಪಿಯ ನಾಲ್ಕು ಸಂಭಾವ್ಯರ ಪಟ್ಟಿ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ ತೆರವಾದ ಅಸೆಂಬ್ಲಿ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಎನ್ನುವ ಚರ್ಚೆ ಬಿಜೆಪಿಯಲ್ಲಿ ಜೋರಾಗಿ ನಡೆಯಲು ಆರಂಭವಾಗಿದೆ. ಆಗಲೇ, ಲಾಬಿಗಳು ಶುರುವಾಗಿದೆ. ಮಾರ್ಚ್ ನಿಂದ ಮೇ ತಿಂಗಳ ಅವಧಿಯಲ್ಲಿ, ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ವೇಳೆ, ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಹೀಗಾಗಿ ಇದೀಗ ಬಿಜೆಪಿಯಿಂದ ಈ ನಾಲ್ಕು ಸ್ಪರ್ಧಿಗಳು ಅಲ್ಲಿ ಒಬ್ಬರು ಸ್ಪರ್ಧಿಸಬಹುದು ಎಂದು ಹೇಳಲಾಗುತ್ತಿದೆ.

ಬಿಜೆಪಿ ಸಂಭಾವ್ಯರ ಪಟ್ಟಿ

ಜಿಎಂ ಸಿದ್ದೇಶ್ವರ ಕುಟುಂಬದ ಸದಸ್ಯರು ಅಥವಾ ಅವರು ಶಿಫಾರಸು ಮಾಡುವ ಹೆಸರು

ಲೋಕಿಕೆರೆ ನಾಗರಾಜ್

ಯಶ್ವಂತ್ ರಾವ್ ಜಾಧವ್

ಬಿಜಿ ಅಜಯ್ ಕುಮಾರ್