

ನವದೆಹಲಿ: ದೆಹಲಿಯಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನದಲ್ಲಿ ಪಾನಮತ್ತ ಪ್ರಯಾಣಿಕನೋರ್ವ ಸಹ ಪ್ರಯಾಣಿಕನ ಮೇಲೆ ಮೂತ್ರ ಮಾಡಿರುವ ಘಟನೆ ನಡೆದಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಡುಕ ಪ್ರಯಾಣಿಕನೊಬ್ಬ ವಿಮಾನ ಕ್ಯಾಬಿನ್ ಒಳಗೆ ಮೂತ್ರ ವಿಸರ್ಜಿಸುತ್ತಿರುವುದನ್ನು ತೋರಿಸುತ್ತದೆ. ಬಿಸಿನೆಸ್ ಕ್ಲಾಸ್ ಕ್ಯಾಬಿನ್‌ನಲ್ಲಿ ಪ್ರಯಾಣ ಮಾಡುತ್ತಿದ್ದು, ಸಹ ಪ್ರಯಾಣಿಕರಲ್ಲಿ ಒಬ್ಬರಾದ ಶಿವಮ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಇಡೀ ಘಟನೆಯ ಕುರಿತು ಬರೆದಿದ್ದಾರೆ.
ಅದೃಷ್ಟವಶಾತ್ ಬ್ಯಸಿನೆಸ್ ಕ್ಲಾಸ್‌ನಲ್ಲಿ ಯಾವುದೇ ಮಹಿಳಾ ಪ್ರಯಾಣಿಕರು ಇರಲಿಲ್ಲ. ಈ ಕುರಿತು ಏರ್‌ಇಂಡಿಯಾ ಇಲ್ಲಿಯವರೆಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.













