Home News ಪುತ್ತೂರು ಯುವತಿ ವಂಚನೆ ಪ್ರಕರಣ: ಬಿಜೆಪಿ ನಾಯಕ ಜಗನ್ನಿವಾಸ ರಾವ್‌ ಪಕ್ಷದಿಂದ ಉಚ್ಛಾಟನೆ

ಪುತ್ತೂರು ಯುವತಿ ವಂಚನೆ ಪ್ರಕರಣ: ಬಿಜೆಪಿ ನಾಯಕ ಜಗನ್ನಿವಾಸ ರಾವ್‌ ಪಕ್ಷದಿಂದ ಉಚ್ಛಾಟನೆ

Hindu neighbor gifts plot of land

Hindu neighbour gifts land to Muslim journalist

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಕೃಷ್ಣ ಜೆ ರಾವ್‌ ತಂದೆ ಹಾಗೂ ಬಿಜೆಪಿ ಮುಖಂಡ ಜಗನ್ನಿವಾಸ ರಾವ್‌ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಲಾಗಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್‌ ಕುಂಪಲ ಖಡಕ್‌ ಆದೇಶ ಹೊರಡಿಸಿದ್ದಾರೆ.

ವಂಚನೆ ಪ್ರಕರಣ ಬೆಳಕಿಗೆ ಬಂದ ನಂತರ ಜಗನ್ನಿವಾಸ ರಾವ್‌ ಅವರಿಗೆ ನೋಟಿಸ್‌ ನೀಡಿ ಪಕ್ಷದ ಚಟುವಟಿಕೆಗಳಿಂದ ದೂರ ಇಡಲಾಗಿತ್ತು. ಆಗ ಜಗನ್ನಿವಾಸ ರಾವ್‌ ಅವರು ʼಡಿಎನ್‌ಎ ಪರೀಕ್ಷೆಯಲ್ಲಿ ಸತ್ಯ ಸಾಬೀತಾದರೆ, ಸಂತ್ರಸ್ತ ಯುವತಿಯೊಂದಿಗೆ ಮಗನ ಮದುವೆ ಮಾಡಿಸುತ್ತೇನೆʼ ಎಂದು ಪಕ್ಷದ ವೇದಿಕೆಯಲ್ಲಿ ಹಾಗೂ ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರ ಮುಂದೆ ಹೇಳಿದ್ದರು.

ನಂತರ ವೈದ್ಯಕೀಯ ವರದಿಗಳು ಬಂದ ನಂತರವೂ ತಮ್ಮ ಮಾತಿನಂತೆ ನಡೆದುಕೊಳ್ಳದ ಹಿನ್ನೆಲೆಯಲ್ಲಿ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.