Home Food Onion : ಈರುಳ್ಳಿ ಮೊಳಕೆಯೊಡೆದಿದೆ ಎಂದು ಬಿಸಾಡುತ್ತೀರಾ? ಯಾವತ್ತೂ ಹೀಗೆ ಮಾಡಬೇಡಿ

Onion : ಈರುಳ್ಳಿ ಮೊಳಕೆಯೊಡೆದಿದೆ ಎಂದು ಬಿಸಾಡುತ್ತೀರಾ? ಯಾವತ್ತೂ ಹೀಗೆ ಮಾಡಬೇಡಿ

Hindu neighbor gifts plot of land

Hindu neighbour gifts land to Muslim journalist

Onion : ಅಡುಗೆ ರುಚಿಕರವಾಗಿ ಇರಬೇಕೆಂದರೆ ಅದರಲ್ಲಿ ಈರುಳ್ಳಿಯೂ ಕೂಡ ಬೆರೆತಿರಬೇಕು. ಅಂದರೆ ಈರುಳ್ಳಿ ಅಡುಗೆ ಮಾಡಲು ಬೇಕಾಗಿರುವಂತಹ ಒಂದು ಪ್ರಮುಖವಾದ ತರಕಾರಿ. ಈರುಳ್ಳಿಯನ್ನು ಮನೆಗೆ ತರುವಾಗ ಕೆಲವರು ಒಂದು ಎರಡು ಕೆಜಿಯನ್ನು ಕೊಂಡು ಬಂದರೆ ಇನ್ನು ಕೆಲವರು 10 ಕೆಜಿವರೆಗೂ ಒಮ್ಮೆಲೇ ತರುವುದುಂಟು. ಹೀಗೆ ತಂದ ಸಂದರ್ಭದಲ್ಲಿ ತುಂಬಾ ದಿನ ಇಟ್ಟಾಗ ಈರುಳ್ಳಿಯೂ ಮೊಳಕೆ ಒಡೆಯುತ್ತದೆ. ಹೀಗಾದಾಗ ಇದನ್ನು ತಿನ್ನಬಾರದು ಎಂದುಕೊಂಡು ಅನೇಕರು ಮೊಳಕೆ ಒಡೆದ ಈರುಳ್ಳಿಯನ್ನು ಬಿಸಾಡುತ್ತಾರೆ. ಆದರೆ ನೀವೆಂದು ಕೂಡ ಈ ತಪ್ಪನ್ನು ಮಾಡಬೇಡಿ. ಇದಕ್ಕೆ ಇಲ್ಲಿದೆ ನೋಡಿ ಉತ್ತರ.

ಹೌದು, ಈರುಳ್ಳಿ ಮೊಳಕೆಯೊಡೆದಾಗ ಕೆಲವರು ಈ ರೀತಿ ಮೊಳಕೆಯೊಡೆದ ಈರುಳ್ಳಿಯನ್ನು ಸೇವನೆ ಮಾಡಬಾರದು ಎಂದು ಹೇಳುತ್ತಾರೆ. ಆದರೆ ಈರುಳ್ಳಿಗೆ ಬರುವ ಹಸಿರು ಮೊಳಕೆ ವಿಷಕಾರಿಯಲ್ಲ. ವಾಸ್ತವವದಲ್ಲಿ, ಈರುಳ್ಳಿ ಹಳೆಯದಾದಾಗ ಮತ್ತು ಸ್ವಲ್ಪ ತೇವಾಂಶ ಪಡೆದುಕೊಂಡಾಗ ಅದು ಮತ್ತೆ ಮೊಳಕೆಯೊಡೆಯಲು ಪ್ರಾರಂಭಿಸುತ್ತದೆ. ದಿನಗಳು ಕಳೆದಂತೆ, ಅದರಿಂದ ಹಸಿರು ಎಲೆ ಹೊರಹೊಮ್ಮುತ್ತದೆ. ಈ ಎಲೆಯ ಸೇವನೆ ಮಾಡುವುದು ಒಳ್ಳೆಯದು. ಭಯಪಡುವ ಯಾವುದೇ ಅವಶ್ಯಕತೆ ಇಲ್ಲ. ಆದರೆ ಈರುಳ್ಳಿ ತಿನ್ನಲು ಸುರಕ್ಷಿತವಾಗಿದ್ದರೂ, ಅವುಗಳ ಗುಣಲಕ್ಷಣಗಳಲ್ಲಿ ಕೆಲವು ಬದಲಾವಣೆಗಳು ಸಂಭವಿಸುತ್ತವೆ. ಈರುಳ್ಳಿ ಮೊಳಕೆಯೊಡೆದಾಗ, ಒಳಭಾಗವು ಸ್ವಲ್ಪ ಮೃದು ಅಥವಾ ಕೋಮಲವಾಗುತ್ತದೆ.

ಇನ್ನು ಈ ಈರುಳ್ಳಿ ಸಾಮಾನ್ಯ ಈರುಳ್ಳಿಯಂತೆ ರುಚಿ ಕೊಡದಿರಬಹುದು. ಸ್ವಲ್ಪ ಕಹಿ ರುಚಿಯನ್ನು ಹೊಂದಿರಬಹುದು. ನೀವು ಅಡುಗೆ ಮಾಡುವಾಗ ಮೊಳಕೆಗಳನ್ನು ಕತ್ತರಿಸಿ ಸಲಾಡ್‌ ಅಥವಾ ಇನ್ನಿತರ ಆಹಾರಗಳಲ್ಲಿ ಬಳಸಬಹುದು. ಏಕೆಂದರೆ ಅವು ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವುದರಿಂದ ಇದರ ಸೇವನೆ ಆರೋಗ್ಯಕ್ಕೂ ಒಳ್ಳೆಯದು. ಆದರೆ ಮೊಳಕೆಯೊಡೆದ ಈರುಳ್ಳಿಯನ್ನು ಒತ್ತಿದಾಗ ತುಂಬಾ ಮೃದುವಾಗಿದ್ದರೆ ಅಥವಾ ತುಂಬಾ ಒಣಗಿದ್ದರೆ ಅಥವಾ ಅದರ ಮೇಲೆ ಕಪ್ಪು ಕಲೆಗಳಿದ್ದರೆ, ಅದನ್ನು ಬಳಸಬೇಡಿ. ಅಂತಹ ಈರುಳ್ಳಿ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.