

ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ದಿನಾಂಕ:24 12 2025 ರಂದು ನೇಮೋತ್ಸವದ ಸಂದರ್ಭದಲ್ಲಿ ಕಮಲ ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಳವು ಮಾಡಿದ ಮೂರು ಮಹಿಳೆಯರನ್ನು ಪುತ್ತೂರಿನಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದೆ.
ತಮಿಳುನಾಡು ರಾಜ್ಯದ ಕೃಷ್ಣಗಿರಿ ಮಾರಿಯಮ್ಮ ಬೀದಿಯ ಶೀಥಲ್, ಕಾಳಿಯಮ್ಮ ಹಾಗೂ ಮಾರಿ ಬಂಧಿತ ಆರೋಪಿಗಳು
ಘಟನೆ ವಿವರ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೆಜಮಾಡಿ ಗರಡಿಯಲ್ಲಿ ಶ್ರೀಬ್ರಹ್ಮಬೈದರ್ಕಳ ಗರಡಿ ನೇಮೋತ್ಸವದ ಸಂದರ್ಭದಲ್ಲಿ ವೃದ್ಧೆಯೊಬ್ಬರ ಚಿನ್ನದ ಸರವನ್ನು ಕಳ್ಳಿಯರು ಲಪಟಾಯಿಸಿದ್ದಾರೆ.
ಸಿಸಿ ಕ್ಯಾಮೆರಾದಲ್ಲಿ ಮೂವರು ಕಳ್ಳಿಯರ ಕರಾಮತ್ತು ಸೆರೆಯಾಗಿದೆ. ವೃದ್ಧೆಯನ್ನು ಮೂರು ಕಡೆಯಿಂದ ಸುತ್ತುವರಿದು ಚಿನ್ನದ ಸರ ಕದ್ದಿದ್ದಾರೆ. ಹೆಜಮಾಡಿ ನಿವಾಸಿ ಕಮಲ ಎಂಬುವವರ ಕುತ್ತಿಗೆಯಲ್ಲಿದ್ದ ಬಂಗಾರದ ಸರವನ್ನು ಪೂಜೆಯ ಸಂದರ್ಭದಲ್ಲಿ ಮೂವರು ಕಳ್ಳಿಯರು ಗಂಟೆ ಹೊಡೆಯುವ ನೆಪದಲ್ಲಿ ಕದ್ದಿದ್ದಾರೆ.
2 ಲಕ್ಷ ಮೌಲ್ಯದ ಚಿನ್ನದ ಸರ ಎಂದು ಹೇಳಲಾಗಿದೆ.













