Home News Ather : ಫೇಮಸ್ ಆಥರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈಗಲೇ ಖರೀದಿಸಿ – ಜನವರಿ 1...

Ather : ಫೇಮಸ್ ಆಥರ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಈಗಲೇ ಖರೀದಿಸಿ – ಜನವರಿ 1 ರಿಂದ ಹೆಚ್ಚಾಗಲಿದೆ ರೇಟ್

Hindu neighbor gifts plot of land

Hindu neighbour gifts land to Muslim journalist

Ather: ಎಲೆಕ್ಟ್ರಿಕ್ ಸ್ಕೂಟರ್ ಗಳ ಪೈಕಿ ಆಥರ್ ಸ್ಕೂಟರ್ ಗೆ ಬಾರಿ ಡಿಮ್ಯಾಂಡ್ ಇದೆ. ಅಲ್ಲದೆ ಅತ್ಯಂತ ಜನಪ್ರಿಯ ಸ್ಕೂಟರ್ ಕೂಡ ಇದು. ನಿಮಗೇನಾದರೂ ಈ ಸ್ಕೂಟರನ್ನು ಖರೀದಿಸುವ ಆಲೋಚನೆ ಇದ್ದರೆ ಈಗಲೇ ಖರೀದಿಸಿ ಬಿಡಿ. ಯಾಕೆಂದರೆ ಜನವರಿ ಒಂದರಿಂದ ಇವುಗಳ ದರದಲ್ಲಿ ಬಾರಿ ಏರಿಕೆಯಾಗಲಿದೆ.

ಹೌದು, ಕಂಪನಿಯು ಜನವರಿ 1, 2026 ರಿಂದ ಆಥರ್ ತನ್ನ ಎಲ್ಲಾ ಸ್ಕೂಟರ್ ಮಾದರಿಗಳ ಬೆಲೆಯನ್ನು 3,000 ರೂ.ಗಳವರೆಗೆ ಹೆಚ್ಚಿಸುವುದಾಗಿ ಘೋಷಿಸಿದೆ. ಬೆಲೆ ಬದಲಾವಣೆಯ ಮೊದಲು ಕಂಪನಿಯು ಗ್ರಾಹಕರಿಗೆ ‘ಎಲೆಕ್ಟ್ರಿಕ್ ಡಿಸೆಂಬರ್’ ಎಂಬ ಕೊಡುಗೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ, ಆಯ್ದ ನಗರಗಳಲ್ಲಿ ಸ್ಕೂಟರ್‌ಗಳ ಖರೀದಿಯ ಮೇಲೆ ಗ್ರಾಹಕರಿಗೆ 20,000 ರೂ.ಗಳವರೆಗೆ ಪ್ರಯೋಜನಗಳನ್ನು ನೀಡಲಾಗುತ್ತಿದೆ, ಇದರಲ್ಲಿ ವಿನಿಮಯ ಬೋನಸ್, ನಗದು ರಿಯಾಯಿತಿ ಅಥವಾ ಆಕ್ಸೆಸರೀಸ್‌ಗಳು ಸೇರಿರಬಹುದು. ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏಥರ್ ಎನರ್ಜಿ ತಿಳಿಸಿದೆ. 

ಆಥರ್‌ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬೆಲೆ

ಆಥರ್ ರಿಜ್ತಾ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ (ಅಂದಾಜು) 1 ಲಕ್ಷ 9 ಸಾವಿರದಿಂದ 1 ಲಕ್ಷ 45 ಸಾವಿರ ರೂ.

ಆಥರ್ 450S ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ ಸುಮಾರು 1,20,000 ರಿಂದ 1,35,000 ರೂ.

ಆಥರ್ 450X ನ ಎಕ್ಸ್ ಶೋ ರೂಂ ಬೆಲೆ ಸುಮಾರು 1 ಲಕ್ಷ 41 ಸಾವಿರದಿಂದ 1 ಲಕ್ಷ 57 ಸಾವಿರ ರೂ.

ಆಥರ್ 450 ಅಪೆಕ್ಸ್ ಸ್ಕೂಟರ್‌ನ ಬೆಲೆ 1 ಲಕ್ಷ 83 ಸಾವಿರದಿಂದ 1 ಲಕ್ಷ 91 ಸಾವಿರ ರೂ.