Lionel Messi: ಫುಟ್ಬಾಲ್ ದಂತಕತೆ ಮೆಸ್ಸಿ ಇಂಡಿಯಾ ಪ್ರವಾಸದಲ್ಲಿ ಗಳಿಸಿದೆಷ್ಟು ಗೊತ್ತಾ? ಅಬ್ಬಬ್ಬಾ.. ಒಂದು ಸೆಲ್ಫಿ & ಶೇಕ್ ಹ್ಯಾಂಡ್ಗೆ 10 ಲಕ್ಷ ರೂ!!

Share the Article

 Lionel Messi: ಪುಟ್ಬಾಲ್ ದಂತಕತೆ ಲಿಯೋನಲ್ ಮೆಸ್ಸಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದರು. ಕೋಲ್ಕತ್ತಾ ದೆಹಲಿ, ಹೈದರಾಬಾಸ್‌ ಮುಂಬೈನಲ್ಲಿ ಅವರು ಟೂರ್ ಮಾಡುವ ಮೂಲಕ ಪುಟ್ಬಾಲ್ ಆಡಿ ಅಭಿಮಾನಿಗಳ ಮನ ಸೆಳೆದಿದ್ದರು. ಆದರ ಮೆ

ಸ್ಸಿ ಇಂಡಿಯಾ ಪ್ರವಾಸಕ್ಕೆ ಆದ ಖರ್ಚು ಎಷ್ಟು? ಅವರು ಮಾಡುತ್ತಿದ್ದ ಚಾರ್ಜ್ ಎಷ್ಟು ಎಂದು ಕೇಳಿದರೆ ನೀವೇ ಶಾಕ್ ಆಗುತ್ತೀರಾ.

ಭಾರತದಲ್ಲಿ ಮೆಸ್ಸಿ ಟೂರ್ ಆಯೋಜಿಸಿದ್ದ ಆಯೋಜಕರು, ಮೆಸ್ಸಿ ಜೊತೆ ಒಂದು ಫೋಟೋ ತೆಗೆಸಿಕೊಳ್ಳುವುದಕ್ಕೆ ಅಭಿಮಾನಿಗಳಿಗೆ 10 ಲಕ್ಷ ರೂಪಾಯಿ ನಿಗದಿ ಮಾಡಿದ್ದರು. ಹಾಗೆಯೇ ಜಸ್ಟ್‌ ಶೇಕ್‌ ಹ್ಯಾಂಡ್ ಮಾಡುವುದಕ್ಕೂ 10 ಲಕ್ಷ ರೂಪಾಯಿ ನಿಗದಿ ಮಾಡಲಾಗಿತ್ತು. ಹಾಗೆಯೇ ಇನ್ನೂ ವಿವಿಧ ಹಂತಗಳಲ್ಲಿ ವಿವಿಧ ರೀತಿಯ ಬೆಲೆಯ ಟಿಕೆಟ್‌ಗಳನ್ನು ಮಾರಲಾಗಿತ್ತು. ಹಾಗಿದ್ರೆ ಇಂಡಿಯಾ ಪ್ರವಾಸದಲ್ಲಿ ಮೆಸ್ಸಿ ಗಳಿಸಿಕೊಂಡ ಹೋದ ಹಣವೆಷ್ಟು ನೋಡಿ.

ಮೆಸ್ಸಿಯ ಭಾರತ ಭೇಟಿಗೆ ಸಂಬಂಧಿಸಿದ ಹಣಕಾಸಿನ ವಿವರಗಳನ್ನು ದತ್ತಾ ಬಹಿರಂಗಪಡಿಸಿದ್ದು, ಲಿಯೋನೆಲ್ ಮೆಸ್ಸಿಗೆ ಭಾರತ ಪ್ರವಾಸಕ್ಕಾಗಿ 89 ಕೋಟಿ ರೂ.ಗಳನ್ನು ನೀಡಲಾಗಿದ್ದು, 11 ಕೋಟಿ ರೂ.ಗಳನ್ನು ಭಾರತ ಸರ್ಕಾರಕ್ಕೆ ತೆರಿಗೆಯಾಗಿ ಪಾವತಿಸಲಾಗಿತ್ತು. ಹೀಗಾಗಿ ಒಟ್ಟು ವೆಚ್ಚವನ್ನು 100 ಕೋಟಿ ರೂ. ಎಂದು ದತ್ತಾ ಹೇಳಿದ್ದಾರೆ. ಈ ಮೊತ್ತದಲ್ಲಿ, ಶೇಕಡಾ 30 ರಷ್ಟನ್ನು ಪ್ರಾಯೋಜಕರಿಂದ ಪಡೆಯಲಾಗಿದ್ದು, ಇನ್ನೂ ಶೇಕಡಾ 30 ರಷ್ಟು ಟಿಕೆಟ್ ಮಾರಾಟದ ಮೂಲಕ ಗಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Comments are closed.