Home Karnataka State Politics Updates DK Shivkumar : ಡಿಕೆಶಿ ಮನೆಗೆ ದಿಢೀರ್ ಭೇಟಿಕೊಟ್ಟ 20ಕ್ಕೂ ಹೆಚ್ಚು ನಾಗ ಸಾಧುಗಳು –...

DK Shivkumar : ಡಿಕೆಶಿ ಮನೆಗೆ ದಿಢೀರ್ ಭೇಟಿಕೊಟ್ಟ 20ಕ್ಕೂ ಹೆಚ್ಚು ನಾಗ ಸಾಧುಗಳು – ರಾಜಕೀಯ ವಲಯದಲ್ಲಿ ಭಾರಿ ಸಂಚಲನ

Hindu neighbor gifts plot of land

Hindu neighbour gifts land to Muslim journalist

DK Shivkumar : ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಅವರು ಟೆಂಪಲ್ ರನ್ ಮಾಡುತ್ತಿದ್ದಾರೆ. ಇದರ ನಡುವೆ ಇದೀಗ ಸುಮಾರು 20ಕ್ಕೂ ಹೆಚ್ಚು ನಾಗ ಸಾಧುಗಳು ಡಿಕೆ ಶಿವಕುಮಾರ್ ಅವರ ಮನೆಗೆ ದಿಢೀರ್ ಭೇಟಿಕೊಟ್ಟು ಆಶೀರ್ವಾದ ಮಾಡಿದ್ದಾರೆ.

ಹೌದು, ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿಕೆಶಿ ನಿವಾಸಕ್ಕೆ 20ಕ್ಕೂ ಹೆಚ್ಚು ಹರಿದ್ವಾರದ ನಾಗ ಸಾಧುಗಳು (Naga Sadhus) ದಿಢೀರ್‌ ಬೇಟಿ ನೀಡಿ ಡಿಸಿಎಂಗೆ ಆಶೀರ್ವಾದ ನೀಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 

ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಅವರು ಮನೆಯ ಬಾಗಿಲಿಗೆ ಬಂದಿದ್ದರು. ಬಂದಾಗ ಅವರನ್ನು ಹೋಗಿ ಎನ್ನಲು ಆಗುವುದಿಲ್ಲ. ಅವರು ಬಂದು ನನಗೆ ಆಶೀರ್ವಾದ ಮಾಡಿದರು. ಮನೆಗೆ ಬಂದವರನ್ನು ಹಾಗೆಯೇ ಕಳುಹಿಸಲು ಆಗುವುದಿಲ್ಲ. ಹೀಗಾಗಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದೆ ಎಂದು ತಿಳಿಸಿದರು.