Vande Bharat : ವಂದೇ ಭಾರತ್ ಲೋಕೋ ಪೈಲೆಟ್ ಗಳ ಸಂಬಳ ಎಷ್ಟಿರುತ್ತದೆ?


Vande Bharat : ದೇಶದ ಅಭಿವೃದ್ಧಿಯ ಸಂಕೇತವಾಗಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ದೇಶಾದ್ಯಂತ ಓಡಾಟವನ್ನು ಆರಂಭಿಸಿವೆ. ಈ ರೈಲುಗಳ ಯಶಸ್ಸಿನ ಹಿಂದೆ ಅನುಭವೀ ಮತ್ತು ಕೌಶಲ್ಯಪೂರ್ಣ ಲೋಕೋ ಪೈಲಟ್‌ಗಳ ಪಾತ್ರ ಬಹಳ ಮುಖ್ಯ. ಹಾಗಿದ್ರೆ ಈ ಲೋಕೋ ಪೈಲೆಟ್ ಗಳ ಸಂಬಳ ಎಷ್ಟಿರುತ್ತದೆ?

7ನೇ ಕೇಂದ್ರ ವೇತನ ಆಯೋಗದ ಪ್ರಕಾರ, ವಂದೇ ಭಾರತ್ ಎಕ್ಸ್‌ಪ್ರೆಸ್ ಲೋಕೋ ಪೈಲಟ್‌ಗಳಿಗೆ ವಿಶೇಷ ಗೌರವದ ಜೊತೆಗೆ ಉತ್ತಮ ಸಂಬಳವೂ ದೊರೆಯುತ್ತದೆ. ಇವರ ಮೂಲ ವೇತನ ಸಾಮಾನ್ಯವಾಗಿ ರೂ. 65,000 ರಿಂದ ರೂ. 85,000 ರವರೆಗೆ ಇರುತ್ತದೆ. ಅತ್ಯಂತ ಹಿರಿಯ ಪೈಲಟ್‌ಗಳು ಅಥವಾ CLI ಹಂತಕ್ಕೆ ಏರಿದವರು ಕೆಲವು ಸಂದರ್ಭಗಳಲ್ಲಿ ತಿಂಗಳಿಗೆ ರೂ. 2 ಲಕ್ಷದಿಂದ ರೂ. 2.5 ಲಕ್ಷವರೆಗೆ ಗಳಿಸುವ ಸಾಧ್ಯತೆ ಇದೆ.
ಸಂಬಳದ ಜೊತೆಗೆ ಲೋಕೋ ಪೈಲಟ್‌ಗಳಿಗೆ ಹಲವು ಸೌಲಭ್ಯಗಳೂ ದೊರೆಯುತ್ತವೆ. ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ಚಾಲನಾ ಭತ್ಯೆ, ಕುಟುಂಬಕ್ಕೆ ವೈದ್ಯಕೀಯ ಸೌಲಭ್ಯಗಳು, ಉಚಿತ ಅಥವಾ ರಿಯಾಯಿತಿ ರೈಲು ಪ್ರಯಾಣ, ನಿವೃತ್ತಿ ನಂತರದ ಪಿಂಚಣಿ ಸೇರಿದಂತೆ ಹಲವು ಪ್ರಯೋಜನಗಳು ಈ ವೃತ್ತಿಯನ್ನು ಆಕರ್ಷಕವಾಗಿಸುತ್ತವೆ.
ಸಹಾಯಕ ಲೋಕೋ ಪೈಲಟ್‌ಗೆ ಮೂಲ ವೇತನ ರೂ. 19,900 ಆಗಿರುತ್ತದೆ. ಎಲ್ಲ ಭತ್ಯೆಗಳನ್ನು ಸೇರಿಸಿದ ನಂತರ ಒಟ್ಟು ಸಂಬಳ ರೂ. 44,000 ರಿಂದ ರೂ. 51,000 ರವರೆಗೆ ಆಗಬಹುದು. ಇದರಲ್ಲಿ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಮತ್ತು ಸಾರಿಗೆ ಭತ್ಯೆ (TA) ಸೇರಿವೆ.

Comments are closed.