IPL-2026 ಹರಾಜಲ್ಲಿ ಮಾರಾಟವಾಗದೆ ಉಳಿದ ಸ್ಟಾರ್ ಆಟಗಾರರು ಇವರು!!

Share the Article

IPL-2026 : ಇಂಡಿಯನ್ ಪ್ರೀಮಿಯರ್ ಲೀಗ್​ 2026ರ ಹರಾಜು ದುಬೈನಲ್ಲಿ ನಡೆದಿದೆ. ಈ ಬಾರಿಯ ಹರಾಜು ಪ್ರಕ್ರಿಯೆ ಅತ್ಯಂತ ಆಶ್ಚರ್ಯಕರ ಸಂಗತಿಗಳಿಗೆ ಕಾರಣವಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಕೆಲವು ಆಟಗಾರರು ಊಹಿಸಲಾಗದ ಮೊತ್ತಕ್ಕೆ ಮಾರಾಟವಾದರೆ ಇನ್ನು ಕೆಲವು ಆಟಗಾರರು ಮಾರಾಟವಾಗದೆ ಉಳಿದಿದ್ದಾರೆ. ಹಾಗಿದ್ದರೆ ಮಾರಾಟವಾಗದೆ ಉಳಿದ ಆಟಗಾರರು ಯಾರು? ಇಲ್ಲಿದೆ ನೋಡಿ ಡೀಟೇಲ್ಸ್.

ಡೆವೊನ್ ಕಾನ್ವೇ: ₹2 ಕೋಟಿ ಮೂಲಬೆಲೆ ಹೊಂದಿದ್ದ ನ್ಯೂಜಿಲೆಂಡ್‌ ತಂಡದ ವಿಕೆಟ್‌ ಕೀಪರ್‌ ಬ್ಯಾಟರ್‌ ಡೆವೊನ್ ಕಾನ್ವೇ ಅವರನ್ನು ಯಾವ ತಂಡವೂ ಕೂಡ ಖರೀದಿಸಲಿಲ್ಲ. 

ಜಾನಿ ಬೆಸ್ಟೊ: ₹2 ಕೋಟಿ ಮೂಲಬೆಲೆ ಹೊಂದಿದ್ದ ಇಂಗ್ಲೆಂಡ್‌ ಮೂಲದ ವಿಕೆಟ್‌ ಕೀಪರ್‌ ಬ್ಯಾಟರ್‌ ಜಾನಿ ಬೆಸ್ಟೊ ಕೂಡ ಮಿನಿ ಹರಾಜಿನಲ್ಲಿ ಖರೀದಿಯಾಗಲಿಲ್ಲ. 

ವಿಜಯ್‌ ಶಂಕರ್‌: ಐಪಿಎಲ್‌ನಲ್ಲಿ ₹30 ಲಕ್ಷ ಮೂಲಬೆಲೆ ಹೊಂದಿದ್ದ ಭಾರತದ ಆಲ್‌ರೌಂಡರ್‌ ವಿಜಯ್‌ ಶಂಕರ್‌ ಅವರನ್ನು ಕೂಡ ಯಾವ ತಂಡವೂ ಖರೀದಿಸಲಿಲ್ಲ. ಅವರು ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌, ಗುಜರಾತ್‌ ಜೈಂಟ್ಸ್ ತಂಡಗಳ ಪರ ಆಡಿದ್ದರು.

ವಿಯಾನ್‌ ಮುಲ್ಡರ್‌: ₹1 ಕೋಟಿ ಮೂಲಬೆಲೆ ಹೊಂದಿದ್ದ ದಕ್ಷಿಣ ಆಫ್ರಿಕಾ ತಂಡದ ಬೌಲಿಂಗ್‌ ಆಲ್‌ರೌಂಡರ್‌ ವಿಯಾನ್‌ ಮುಲ್ಡರ್‌ ಅವರನ್ನು ಕೂಡ ಯಾವುದೇ ತಂಡ ಖರೀದಿಸಲಿಲ್ಲ.

ಕರಣ್‌ ಶರ್ಮಾ: ₹50 ಲಕ್ಷ ಮೂಲಬೆಲೆ ಹೊಂದಿದ್ದ ಭಾರತದ ಸ್ಪಿನ್‌ ಬೌಲರ್‌ ಕರಣ್‌ ಶರ್ಮಾ ಅವರು ಕೂಡ ಖರೀದಿಯಾಗದೇ ಉಳಿದರು. ಈ ಹಿಂದೆ ಸನ್‌ರೈಸರ್ಸ್‌ ಹೈದರಾಬಾದ್‌ ಹಾಗೂ ಆರ್‌ಸಿಬಿ ಪರ ಅವರು ಆಡಿದ್ದರು.

Comments are closed.