ನಿತೀಶ್ ಕುಮಾರ್ ಹಿಜಾಬ್ ಬದಲು ಬೇರೆಡೆ ಮುಟ್ಟಿದ್ದರೆ ಹೇಗೆ- ಇನ್ನೊಬ್ಬ ಸಚಿವರ ವಿವಾದ


ಲಕ್ನೋ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಯುವತಿಯೊಬ್ಬರ ಹಿಜಾಬ್ ಎಳೆದು ವಿವಾದಕ್ಕೀಡಾಗಿರುವ ಬೆನ್ನಲ್ಲೇ ಇನ್ನೊಬ್ಬ ಸಚಿವ ಅದೇ ವಿಷಯದಲ್ಲಿ ವಿವಾದ ಸೃಷ್ಟಿಸಿದ್ದಾರೆ. ಆ ಸಚಿವರು ಬಿಹಾರ ಸಿಎಂ ನಿತೀಶ್ ಕುಮಾರ್ ಅವರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಏನೋ ಹೇಳಿದ್ದು, ಅದು ಇನ್ನೇನೋ ಆಗಿದೆ. ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.

‘ನಿತೀಶ್ ಕೂಡಾ ಮನುಷ್ಯರೇ. ಹಿಜಾಬ್ ಮುಟ್ಟಿದ್ದಕ್ಕೆ ಏಕಿಷ್ಟು ಟೀಕೆ ? ಹಿಜಾಬ್ ಗೇ ಇಷ್ಟಾದರೆ, ಒಂದು ವೇಳೆ ಅವರು ಬೇರೆಡೆ ಮುಟ್ಟಿದ್ದರೆ ಇನ್ನೆಷ್ಟು ಟೀಕೆ ಎದುರಿಸಬೇಕಿತ್ತೋ?’ ಎಂದು ಸಂಜಯ್ ಹೇಳಿದ್ದಾರೆ. ಈ ಬಗ್ಗೆ ಟೀಕೆ ವ್ಯಕ್ತವಾದ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಅವರು, ‘ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಎಂದಿದ್ದಾರೆ. ಅಸಲಿಗೆ ಅವತ್ತು ಸಿಎಂ ನಿತೀಶ್ ಕುಮಾರ್ ರವರು ಮುಖದ ತುಂಬಾ ಹಿಜಾಬ್ ಧರಿಸಿದ್ದ ಆಯುಷ್ ವೈದ್ಯೆಗೆ ಮುಖ ತೋರಿಸಿ ಎಂದು ಹೇಳಿ, ಹಿಜಾಬ್ ಹಿಡಿದು ಜಗ್ಗಿದ್ದರು. ಅದನ್ನು ಸಮರ್ಥಿಸಿ ಮಾತಾಡುವ ಭರದಲ್ಲಿ, ಅವರ ಮಾತು ಮುಖದಿಂದ ಕೆಳಕ್ಕೆ ಹರಿದಿದೆ. ವಿವಾದ ಸೃಷ್ಟಿಯಾಗಿದೆ.

Comments are closed.