Dharwad: ನೇಮಕಾತಿ ನಡೆಯುತ್ತಿಲ್ಲವೆಂದು ಮನನೊಂದು ಉದ್ಯೋಗಾಕಾಂಕ್ಷಿ ಯುವತಿ ಆತ್ಮಹತ್ಯೆ

Dharwad: ಕಳೆದ 4 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿ ಯುವತಿ ರೈಲು ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ ನಗರದ (Dharwad) ಶಿವಗಿರಿಯಲ್ಲಿ ನಡೆದಿದೆ.ಬಳ್ಳಾರಿ ಮೂಲದ ವಿದ್ಯಾರ್ಥಿನಿ ಪಲ್ಲವಿ ಕಗ್ಗಲ್ (25) ಆತ್ಮಹತ್ಯೆ ಮಾಡಿಕೊಂಡ ಯುವತಿ.

ನೇಮಕಾತಿಗಳು ನಡೆಯುತ್ತಿಲ್ಲ ನಡೆಯುತ್ತಿಲ್ಲ ಅಂತ ಮನನೊಂದು ಶಿವಗಿರಿಯ ರೈಲ್ವೆ ಟ್ರ್ಯಾಕ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಮೃತ ಪಲ್ಲವಿ ಕಗ್ಗಲ್ ಕಳೆದ 4 ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನಡೆಸುತ್ತಿದ್ದರು. ರೇಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ರೇಲ್ವೆ ಪೋಲಿಸರು ಭೇಟಿ ಮಾಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
Comments are closed.