Kerala: ‘ನಮ್ ಪಾರ್ಟಿಲಿ ಹೆಂಗುಸ್ರು ಇರೋದು ಚುನಾವಣೆಯಲ್ಲಿ ಸ್ಪರ್ಧಿಸಲಲ್ಲ, ಗಂಡಂದಿರೊಂದಿಗೆ ಮಲಗಲು ಮತ್ತು ಹೆರಲು ಅಷ್ಟೇ’ – CPM ಲೀಡರ್ ಹೇಳಿಕೆ


Kerala: ಕೇರಳದಲ್ಲಿ ಮಾರ್ಕ್ಸವಾದಿ ಕಮ್ಯುನಿಸ್ಟ ಪಕ್ಷದ ನಾಯಕರು ಒಬ್ಬರು ಮಹಿಳೆಯರ ಕುರಿತು ಅಸಹ್ಯಕರ ಹೇಳಿಕೆಯನ್ನು ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

ಮುಸ್ಲಿಂ ಲೀಗ್ ಮಲಪ್ಪುರಂ ಜಿಲ್ಲೆಯ ತೆನ್ನಾಲದಲ್ಲಿ ಪಾಲಿಕೆ ಚುನಾವಣೆಗೆ ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಈ ವಿಚಾರವನ್ನು ಇಟ್ಟುಕೊಂಡು ಮಾತನಾಡಿದ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ (ಮಾಕಪ) ಮಾಜಿ ಸ್ಥಳೀಯ ಕಾರ್ಯದರ್ಶಿ ಸೈಯದ್ ಅಲಿ ಮಜೀದ್ ಅವರು ‘ಒಂದು ಮತವನ್ನು ಪಡೆಯಲು ಅಥವಾ ಒಂದು ವಾರ್ಡ್ ಅನ್ನು ಗೆಲ್ಲಲು ಮಹಿಳೆಯರನ್ನು ಇತರ ಪುರುಷರ ಮುಂದೆ ಮೆರವಣಿಗೆ ಮಾಡಲಾಗುವುದಿಲ್ಲ. ನಮ್ಮಲ್ಲಿಯೂ ವಿವಾಹಿತ ಮಹಿಳೆಯರಿದ್ದಾರೆ; ಆದರೆ ಅವರು ತಮ್ಮ ಪತಿಯರೊಂದಿಗೆ ಮಲಗಲು ಮತ್ತು ಮಕ್ಕಳಿಗೆ ಜನ್ಮ ನೀಡಲು ಇದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಸಯ್ಯದ್ ಅವರ ಹೇಳಿಕೆ ಕುರಿತು ಇದೀಗ ಕೇರಳದಲ್ಲಿ ಸಾಕಷ್ಟು ವಿವಾದ ಭುಗಿಲಿದ್ದಿದೆ. ಅವರ ವಿರುದ್ಧ ಆಕ್ರೋಶ ಕೇಳಿ ಬಂದಿದೆ.

Comments are closed.