Brazil: ಗಾಳಿ ರಭಸಕ್ಕೆ ಕುಸಿದು ಬಿದ್ದ ಇತಿಹಾಸ ಪ್ರಸಿದ್ಧ ಲಿಬರ್ಟಿ ಸ್ಟ್ಯಾಚ್ಯು


Brazil: ಬಿರುಗಾಳಿಯ ರಭಸಕ್ಕೆ ದಕ್ಷಿಣ ಬ್ರೆಜಿಲ್ನ ಗುವಾಯ್ಬಾದಲ್ಲಿ ಇತಿಹಾಸ ಪ್ರಸಿದ್ಧ ಲಿಬರ್ಟಿ ಪ್ರತಿಮೆ ನೆಲಕ್ಕುರುಳಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೇಗವಾಗಿ ಗಾಳಿ ಬೀಸುತ್ತಿದ್ದ ಪರಿಣಾಮ ಪ್ರತಿಮೆ ಓರೆಯಾಗಿ ಬಳಿಕ ಖಾಲಿ ಪಾರ್ಕಿಂಗ್ ಪ್ರದೇಶದಲ್ಲಿ ಬಿದ್ದಿದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಮೂಲ ಪ್ರತಿಮೆಯ ಹೋಲಿಕೆಯುಳ್ಳ ಈ ಪ್ರತಿಕೃತಿಯನ್ನು 2020 ರಲ್ಲಿ ಸ್ಥಾಪಿಸಲಾಗಿತ್ತು. ನಗರವನ್ನು ಅಪ್ಪಳಿಸಿದ ಬಿರುಗಾಳಿಯ ರಭಸಕ್ಕೆ ಪ್ರತಿಮೆಯು ಮೊದಲಿಗೆ ಓರೆಯಾಗಿ, ನಂತರ ಪಕ್ಕದಲ್ಲಿದ್ದ ಖಾಲಿ ಪಾರ್ಕಿಂಗ್ ಪ್ರದೇಶದಲ್ಲಿ ಬಿದ್ದಿದೆ. ವರದಿಯ ಪ್ರಕಾರ, ಗಾಳಿಯ ವೇಗವು ಗಂಟೆಗೆ 80 ರಿಂದ 90 ಕಿ.ಮೀ. ಇತ್ತು ಎನ್ನಲಾಗಿದೆ.
ದಕ್ಷಿಣ ಬ್ರೆಜಿಲ್‌ನಾದ್ಯಂತ ಚಂಡಮಾರುತ ಬಲವಾಗಿ ಬೀಸುತ್ತಿದ್ದಂತೆ, ಫಾಸ್ಟ್-ಫುಡ್ ಔಟ್‌ಲೆಟ್ ಬಳಿಯ ಹವಾನ್ ರಿಟೈಲ್ ಮೆಗಾಸ್ಟೋರ್‌ನ ಕಾರು ಪಾರ್ಕಿಂಗ್‌ನಲ್ಲಿ ಸ್ಥಾಪಿಸಲಾದ ಪ್ರತಿಮೆ ನೆಲಕ್ಕುರುಳಿದ್ದು, ಈ ದೃಶ್ಯ ಮೊಬೈಲ್, ಸಿಸಿಟಿವಿಯಲ್ಲಿ ಸೆರೆಯಾಗಿದೆ.

Comments are closed.