Vijayalakshmi : ಅಷ್ಟೊಂದು ಬೆನ್ನು ನೋವು ಇದ್ದರೂ ದರ್ಶನ್ ಆಪರೇಷನ್ ಯಾಕೆ ಮಾಡಿಸಿಲ್ಲ? ಅಸಲಿ ಸತ್ಯ ಬಿಚ್ಚಿಟ್ಟ ಪತ್ನಿ ವಿಜಯಲಕ್ಷ್ಮಿ

Share the Article

Vijayalakshmi : ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ನಟ ದರ್ಶನ್ ಅವರು ಜೈಲು ಪಾಲಾಗಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪ್ರತಿ ಬಾರಿಯೂ ವಿಪರೀತವಾಗಿ ಬೆನ್ನು ನೋವು ಕಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಷ್ಟೊಂದು ಬೆನ್ನು ನೋವು ಇದ್ದರೂ ಕೂಡ ನಟ ದರ್ಶನ್ ಹೊರಗಡೆ ಬಂದ ಸಂದರ್ಭದಲ್ಲಿ ಆಪರೇಷನ್ ಮಾಡಿಸಿಕೊಂಡಿರಲಿಲ್ಲ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ದರ್ಶನ್ ಆಪರೇಷನ್ ಯಾಕೆ ಮಾಡಿಸಿಕೊಂಡಿಲ್ಲ ಎಂಬುದರ ಬಗ್ಗೆ ಇದೀಗ ಅವರ ಪತ್ನಿ ವಿಜಯಲಕ್ಷ್ಮಿ ತಿಳಿಸಿದ್ದಾರೆ.

25 ವರ್ಷದಲ್ಲಿ ಮೊದಲ ಬಾರಿಗೆ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಕ್ಯಾಮರಾ ಮುಂದೆ ಬಂದು ದರ್ಶನ್‌ ಅವರ ಸಿನಿಮಾ ರಿಲೀಸ್‌ ಕಾರಣಕ್ಕೆ ಸಂದರ್ಶನವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಹಲವು ವಿಚಾರಗಳನ್ನು ಬಿಚ್ಚಿಟ್ಟಿರುವ ಅವರು ದರ್ಶನ್ ಅವರ ಬೆನ್ನು ನೋವಿನ ಕುರಿತು ಮಾತನಾಡಿದ್ದಾರೆ.

ಆಪರೇಶನ್‌ ಯಾಕೆ ಮಾಡಿಸಿಕೊಳ್ಳಲಿಲ್ಲ?
ಡೆವಿಲ್‌ ಸಿನಿಮಾ ಶೂಟಿಂಗ್‌ ವೇಳೆ ದರ್ಶನ್‌ ಅವರಿಗೆ ಬೆನ್ನು ನೋವಿತ್ತು. ದರ್ಶನ್‌ ಅವರಿಗೆ ಆಪರೇಶನ್‌ ಆದರೆ ಆರು ತಿಂಗಳು ಅಥವಾ ಒಂದು ವರ್ಷ ಬೆಡ್‌ ರೆಸ್ಟ್‌ ಮಾಡಬೇಕು ಎಂದು ಹೇಳಿದರು. ದರ್ಶನ್‌ ಜಾಬ್‌ನಲ್ಲಿ ಫೈಟ್‌, ಡ್ಯಾನ್ಸ್‌ ಮಾಡಬೇಕು. ಅವರು 9-5 ಜಾಬ್‌ ಮಾಡೋಕೆ ಆಗೋದಿಲ್ಲ. ಭಾರತದಲ್ಲಿ ಆಪರೇಶನ್‌ ಆದರೆ ಹೀಗೆಲ್ಲ ಮಾಡೋಕೆ ಆಗೋದಿಲ್ಲ. ಸಿಂಗಾಪುರದಲ್ಲಿ ವೈದ್ಯರನ್ನು ಕಾಂಟ್ಯಾಕ್ಟ್‌ ಮಾಡಿದಾಗ ಅವರು ಲೇಸರ್‌ ಟ್ರೀಟ್‌ಮೆಂಟ್‌ ಮಾಡಿಸೋಣ ಎಂದರು. ಹೀಗಾಗಿ ಸದ್ಯಕ್ಕೆ ಆಪರೇಷನ್ ಮಾಡುವುದನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.

Comments are closed.