UP: ಉತ್ತರ ಪ್ರದೇಶದಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಅಪಘಾತ – 3 ಕಾರು, 7 ಬಸ್ ಗಳು ಹೊತ್ತಿ ಉರಿದು ನಾಲ್ವರು ಸಜೀವ ದಹನ

Share the Article

Delhi: ಇಂದು ಮುಂಜಾನೆ ಮಥುರಾದ ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ದಟ್ಟವಾದ ಮಂಜಿನಿಂದಾಗಿ ಏಳು ಬಸ್​ಗಳು ಹಾಗೂ ಮೂರು ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 7 ಬಸ್ ಗಳು ಹೊತ್ತಿ ಉರಿದು ನಾಲ್ವರು ಸಜೀವ ದಹನವಾಗಿದ್ದಾರೆ ಎಂದು ವರದಿಯಾಗಿದೆ.

ಹೌದು, ಎಕ್ಸ್‌ಪ್ರೆಸ್‌ವೇಯ ಆಗ್ರಾ-ನೋಯ್ಡಾ ಲೇನ್‌ನಲ್ಲಿರುವ ಮೈಲ್‌ಸ್ಟೋನ್ 127 ರಲ್ಲಿ ಅಪಘಾತ ಸಂಭವಿಸಿದೆ. ದಟ್ಟವಾದ ಮಂಜಿನಿಂದಾಗಿ ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ, ಕೆಲವೇ ನಿಮಿಷಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಎಲ್ಲಾ ವಾಹನಗಳು ತಕ್ಷಣವೇ ಬೆಂಕಿಗೆ ಆಹುತಿಯಾದವು.

ಮೊದಲು ಮೂರು ಕಾರುಗಳು ಡಿಕ್ಕಿ ಹೊಡೆದಿದ್ದು, ನಂತರ ಏಳು ಬಸ್‌ಗಳು ಅವುಗಳಿಗೆ ಡಿಕ್ಕಿ ಹೊಡೆದವು. ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಸುಮಾರು 20 ಆಂಬ್ಯುಲೆನ್ಸ್​ಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಬಲ್ದೇವ್ ಪೊಲೀಸ್ ಠಾಣೆ ಪ್ರದೇಶದ ಮೈಲ್‌ಸ್ಟೋನ್ 127 ಬಳಿ ಬೆಳಗಿನ ಜಾವ 4ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.ಘಟನೆಯ ನಂತರ ಡಿಎಂ ಮತ್ತು ಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ.

Comments are closed.