KSRTC Protest: ಮತ್ತೆ ಸಾರಿಗೆ ನೌಕರರ ಮುಷ್ಕರ; ನಾಳೆಯಿಂದ ಬಸ್ಗಳ ಓಡಾಟ ಇರುತ್ತಾ?

KSRTC Protest: ಸರ್ಕಾರ (Governement) ವರ್ಸಸ್ ಸಾರಿಗೆ ನೌಕರರ ಜಟಾಪಟಿ ಜೋರಾಗಿದೆ. ಸರ್ಕಾರದ ಸಾಲು ಸಾಲು ಸಂಧಾನ ಸಭೆ ವಿಫಲವಾದ ಬಳಿಕ ಸಾರಿಗೆ ನೌಕರರು ಮತ್ತೆ ಪ್ರತಿಭಟನೆ (Protest) ಹಾದಿ ಹಿಡಿದಿದ್ದಾರೆ. ಅಧಿವೇಶನ ಬಳಿಕ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಸಾರಿಗೆ ನೌಕರರು (Transport Employees) ಚಿಂತನೆ ನಡೆಸಿದ್ದಾರೆ.

ನಾಳೆಯಿಂದ ಮತ್ತೆ ಮುಷ್ಕರ ನಡೆಸಲು ಸಾರಿಗೆ ಸಂಘಟನೆಗಳು (Transport Organizations) ಸಿದ್ದತೆ ಮಾಡಿಕೊಳ್ತಿದ್ದಾರೆ.ಮುಷ್ಕರ ಸಂಬಂಧ ಆಕ್ಟಿವ್ ಆಗಲಿರುವ ಸಾರಿಗೆ ಸಂಘಟನೆಗಳು ಸೋಮವಾರದಿಂದಲೇ ಮುಷ್ಕರಕ್ಕೆ ಮುಂದಾಗಿದೆ.
ಪ್ರತಿ ಡಿಪೋಗೂ ತೆರಳಿ ನೌಕರರಿಗೆ ಖುದ್ದು ಸರ್ಕಾರದ ನಿರ್ಧಾರ ತಿಳಿಸಲು ಪ್ಲಾನ್ ಮಾಡಿದೆ. ಸೆಷನ್ ಮುಗಿಯುತ್ತಿದ್ದಂತೆ ಮುಷ್ಕರ ಘೋಷಣೆಗೆ ನಿರ್ಧಾರ ನಡೆಸಿದೆ.ಸೆಷನ್ ಮುಗಿಯುವವರೆಗೂ ಹಂತ ಹಂತವಾಗಿ ಪ್ರತಿಭಟನೆಗೆ ಯೋಜನೆ ನಡೆಸಿದ್ದಾರೆ. ನಿಗಮಗಳ ಆರ್ಥಿಕ ಪರಿಸ್ಥಿತಿ ಕಾರಣ ಕೊಡ್ತಿರುವ ಸರ್ಕಾರದ ವಿರುದ್ಧ ನೌಕರರ ಆಕ್ರೋಶ ಹೊರಹಾಕಿದ್ದಾರೆ. 2 ವರ್ಷದಿಂದ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರ ಹೋರಾಟ ನಡೆಸಿದ್ದಾರೆ. ಆದ್ರೂ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ಸರ್ಕಾರದಿಂದ ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ನೌಕರರು ಮತ್ತೆ ಪ್ರತಿಭಟನೆ ಮೂಲಕ ಬಿಸಿ ಮುಟ್ಟಿಸಲು ಸಕಲ ತಯಾರಿ ನಡೆಸಿದೆ. ಮುಂದಿನ ದಿನಗಳಲ್ಲಿ ಬಸ್ ಓಡಾಟ ಬಂದ್ ಮಾಡಿ ಮುಷ್ಕರಕ್ಕೆ ಇಳಿಯುವ ಸಾಧ್ಯತೆ ಇದೆ.
ನೌಕರರ ಪ್ರತಿಭಟನಾ ಪೂರ್ವ ಪ್ಲಾನ್
-ನಾಳೆಯಿಂದ ಕರ ಪತ್ರ ಹಂಚಿ ನೌಕರರಲ್ಲಿ ಜಾಗೃತಿ ಮೂಡಿಸುವುದು-ನೌಕರರ ಮುಖಂಡರು ಖುದ್ದು ಡಿಪೊಗಳಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗಿ ಆಗಲು ಮನ ಒಲಿಸುವುದು
-ಡಿಪೋ ಹಂತದಲ್ಲಿ ಪ್ರತಿಭಟನೆಗೆ ಸಜ್ಜು ಮಾಡುವುದು
-ಯಾವುದೇ ಸಂದರ್ಭದಲ್ಲಿ ಮುಷ್ಕರಕ್ಕೆ ಕರೆ ಕೊಡಬಹುದು ಸಜ್ಜಗಿರಿ ಅಂತ ಮಾನಸಿಕವಾಗಿ ರೆಡಿ ಮಾಡುವುದು
-ಅನಿರ್ಧಿಷ್ಟವಾದಿ ಮುಷ್ಕರ ಮೂಲಕ ಸರ್ಕಾರ ಕಟ್ಟಿ ಹಾಕುವ ಪ್ರಯತ್ನ
ಸಾರಿಗೆ ನೌಕರರ ಬೇಡಿಕೆಗಳು?
-38 ತಿಂಗಳ ವೇತನ ಬಾಕಿ ಹಣ ನೀಡಬೇಕು
-ಸರ್ಕಾರಿ ನೌಕರರಿಗೆ ನೀಡುವ ವೇತನಕ್ಕೆ ಸರಿಸಮಾನ ವೇತನ ನೀಡಬೇಕು
-ಕಾರ್ಮಿಕರ ಕಿರುಕುಳ ನಿಲ್ಲಬೇಕು-1-1-2024 ರಿಂದ ವೇತನ ಜಾರಿಗೊಳಿಸುವುದು
Comments are closed.