ಸ್ಕೈ ಡೈವಿಂಗ್ ವೇಳೆ ವಿಮಾನ ರೆಕ್ಕೆಗೆ ಸಿಲುಕಿದ ವ್ಯಕ್ತಿ, ಅಸಾಧ್ಯ ಆದರೂ ಬಚಾವ್!

Share the Article

ಸಿಡ್ನಿ: ಆಸ್ಟ್ರೇಲಿಯಾದ ಕ್ಲೀನ್ಸ್‌ಲ್ಯಾಂಡ್‌ನಲ್ಲಿ ವ್ಯಕ್ತಿಯೊಬ್ಬ ಸುಮಾರು 15,000 ಅಡಿ ಎತ್ತರದಲ್ಲಿ ಸೈಡೈವ್ ಮಾಡುವ ವೇಳೆ ವಿಮಾನದ ರೆಕ್ಷೆಯೊಂದಕ್ಕೆ ಸಿಲುಕಿಕೊಂಡು ಹಕ್ಕಿಯಂತೆ ಪರದಾಡುವಂತಾಗಿದೆ. ಸೆಪ್ಟೆಂಬರ್‌ನಲ್ಲಿ ಕೈರ್ನ್ಸ್‌ನ ದಕ್ಷಿಣದಲ್ಲಿ ನಡೆದ ಸಾಹಸ ಪ್ರದರ್ಶನದ ಸಮಯದಲ್ಲಿ ಸಂಭವಿಸಿದ ಭೀಕರ ಘಟನೆ ಇದಾಗಿದ್ದು, ಈ ಘಟನೆಯ ವಿಡಿಯೋವನ್ನು ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಬ್ಯೂರೋದ ಅಧಿಕಾರಿಗಳು ಹಂಚಿಕೊಂಡಿದ್ದಾರೆ.

ಸಾಹಸ ಪ್ರದರ್ಶನದ ಸಂದರ್ಭವು ಕ್ಷಣಾರ್ಧದಲ್ಲಿ ಆಪಾಯಕಾರಿ ತುರ್ತು ಪರಿಸ್ಥಿತಿಯಾಗಿ ಬದಲಾಗಿದ್ದು, ಅಲ್ಲಿ ಸೈಡೈವರ್ ರಲ್ಲಿ ಒಬ್ಬರು ವಿಮಾನದ ಬಾಗಿಲು ತೆರೆದು ಈ ಇನ್ನೇನು ಜಿಗಿಯಬೇಕೆನ್ನುವಷ್ಟರಲ್ಲಿ ಗಾಳಿ ರಭಸಕ್ಕೆ ವಿಮಾನದ ಒಂದು ತುದಿಯಲ್ಲೇ ಪ್ಯಾರಾಚೂಟ್ ತೆರೆದುಕೊಂಡಿದೆ. ಗಾಳಿಯ ವೇಗವು ಪ್ಯಾರಾಚೂಟ್ ಜತೆಗೆ ಸೈ ಡೈವರ್ ಅನ್ನು ಎಳೆದುಕೊಂಡು ಒಯ್ದು ವಿಮಾನದ ರೆಕ್ಕೆಗೆ ಸಿಕ್ಕಿಸಿ ಬಿಟ್ಟಿದೆ. ವಿಮಾನದ ರೆಕ್ಕೆಗೆ ಪ್ಯಾರಾಚೂಟ್ ಸಿಲುಕಿದ ಪರಿಣಾಮ ಸ್ಯೆಡೈವ‌ರ್ ಗಾಳಿಯಲ್ಲಿ ತೇಲುವಂತಾಗಿದೆ. ಬಳಿಕ ಸಮಯಪ್ರಜ್ಞೆ ಮೆರೆದ ಸೈ ಡೈವರ್ ಅರ್ಧ ಪ್ಯಾರಾಚೂಟ್ ನ್ನು ಕತ್ತರಿಸಿ ಸುರಕ್ಷಿತವಾಗಿ ನೆಲಕ್ಕಿಳಿದಿದ್ದಾರೆ. ಸ್ಕೈಡೈವರ್ ಜೀವ ಗಾಳಿಯಲ್ಲಿ ಸಾವು ಬದುಕಿನ ಮಧ್ಯೆ ತೇಲಾಡುತ್ತಿತ್ತು.

ಭಯಾನಕವಾದ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು ಸಾಹಸ ಪ್ರದರ್ಶನಗಳ ಹಿಂದಿನ ಶ್ರಮ, ಅಪಾಯ, ಅನೂಹ್ಯ ಆಘಾತಗಳನ್ನು ತೆರೆದಿಟ್ಟಿದೆ.

Comments are closed.