Assembly : ‘ಎಲ್ಲಮ್ಮನ ಗುಡ್ಡದಲ್ಲಿ ಮುಲ್ಲನಿಗೇನು ಕೆಲಸ?’ – ಸದನದಲ್ಲಿ ಮಾತನಾಡುವಾಗ ನಡುವೆ ಬಂದ ಶಿವಲಿಂಗೇಗೌಡರಿಗೆ ಗುಮ್ಮಿದ ಯತ್ನಾಳ್

Assembly : ಸಕ್ಕರೆ ಕಾರ್ಖಾನೆ ವಿಚಾರವಾಗಿ ಸದನದಲ್ಲಿ ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾತನಾಡುತ್ತಿದ್ದಾಗ ನಡುವೆ ಬಾಯಿ ಹಾಕಿದ ಅರಸೀಕೆರೆ ಶಾಸಕ ಶಿವಲಿಂಗೇಗೌಡರಿಗೆ ಯತ್ನಾಳ್ ತಮ್ಮದೇ ದಾಟಿಯಲ್ಲಿ ಗುಮ್ಮಿದ್ದಾರೆ.

ಹೌದು, ಸದನದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಅವರು, ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳನ್ನು ಬಂದು ಮಾಡುವ ವಿಚಾರವಾಗಿ ಕುರಿತು ಪ್ರಸ್ತಾಪಿಸಿ ಮಾತನಾಡುತ್ತಿದ್ದರು. ಸಕ್ಕರೆ ಕಾರ್ಖಾನೆಗಳ ಮಾಲೀಕರಿಲ್ಲ ರನ್ನು ಸೇರಿಸಿ ಸಭೆ ನಡೆಸಿ, ಯಾವ ಸಕ್ಕರೆ ಕಾರ್ಖಾನೆಯನ್ನು ಬಂದ್ ಮಾಡದ ರೀತಿಯಲ್ಲಿ ತೀರ್ಮಾನ ನಡೆಸಿ ಎಂಬುದಾಗಿ ಅವರು ಮುಖ್ಯಮಂತ್ರಿಗಳಿಗೆ ಸಲಹೆ ನೀಡುತ್ತಿದ್ದರು.
ಈ ಸಂದರ್ಭದಲ್ಲಿ ನಡುವೆ ಎದ್ದು ನಿಂತು ಮಾತನಾಡಿದ ಶಿವಲಿಂಗೇಗೌಡರು ಯತ್ನಾಳ್ ಅವರೇ ಬರಿ ಇದನ್ನೇ ಹೇಳಬೇಡಿ, ಏನು ಆಗಬೇಕೆಂದು ಸಲಹೆ ನೀಡಿ ಎಂದು ಪದೇ ಪದೇ ಹೇಳುತ್ತಿದ್ದರು. ನೋಡುವಷ್ಟು ನೋಡಿದ ಯತ್ನಾಳ್ ಅವರು ಕೊನೆಗೆ ‘ಎಲ್ಲಮ್ಮನ ಗುಡ್ಡದಲ್ಲಿ ಮುಲ್ಲನಿಗೇನು ಕೆಲಸ’ ಎಂದು ನೇರವಾಗಿ, ಖಾರವಾಗಿ ಸದನದಲ್ಲಿ ಶಿವಲಿಂಗೇ ಗೌಡರಿಗೆ ಗುಮ್ಮಿದ್ದಾರೆ. ಅಂದರೆ ಸಕ್ಕರೆ ಕಾರ್ಖಾನೆಗಳು ಇರುವುದು ಉತ್ತರ ಕರ್ನಾಟಕ ಭಾಗದಲ್ಲಿ. ಅವುಗಳ ಸಮಸ್ಯೆಯನ್ನು ನಾವು ಎತ್ತುತ್ತಿದ್ದೇವೆ. ಇದು ಯಾವುದಕ್ಕೂ ಸಂಬಂಧವೇ ಪಡದ ಶಿವಲಿಂಗೇಗೌಡರು ಮಧ್ಯ ಬಾಯಿ ಹಾಕುತ್ತಿರುವುದು ಏಕೆ? ಎಂಬ ಅರ್ಥದಲ್ಲಿ ಅವರು ಆ ರೀತಿ ಹೇಳಿದ್ದಾರೆ.
Comments are closed.