Home Breaking Entertainment News Kannada D Boss: ಸತ್ತಮೇಲೂ ನೆಮ್ಮದಿಯಿಲ್ಲ! ಕೊಲೆಗೀಡಾದ ರೇಣುಕಾಸ್ವಾಮಿ ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌?!

D Boss: ಸತ್ತಮೇಲೂ ನೆಮ್ಮದಿಯಿಲ್ಲ! ಕೊಲೆಗೀಡಾದ ರೇಣುಕಾಸ್ವಾಮಿ ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌?!

Hindu neighbor gifts plot of land

Hindu neighbour gifts land to Muslim journalist

D Boss: ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಭೀಕರ ಹೊಡೆತಗಳಿಂದ ಚಿತ್ರಹಿಂಸೆ ಅನುಭವಿಸಿ ಕೊಲೆಗೀಡಾದ ರೇಣುಕಾಸ್ವಾಮಿಯವರ ಚಿತ್ರದುರ್ಗದ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸಗೊಳಿಸಿದ್ದಾರೆ.

ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಾಗಿರಲು ಬಿಡದ ಡೆವಿಲ್ ಗ್ಯಾಂಗ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.ಹೌದು, ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ, ಇದೀಗ ರೇಣುಕಾಸ್ವಾಮಿ ಸಮಾಧಿಯನ್ನೇ ಧ್ವಂಸಗೊಳಿಸಿರುವ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ವರದಿಯಾಗಿದೆ.

ಚಿತ್ರದುರ್ಗದ ಲಕ್ಷ್ಮೀಪುರ ರುದ್ರಭೂಮಿಯಲ್ಲಿರುವ ರೇಣುಕಾಸ್ವಾಮಿ ಸಮಾಧಿಯ ಮೇಲಿನ ನಾಮಫಲಕವನ್ನು ಕಿಡಿಗೇಡಿಗಳು ಪುಡಿಪುಡಿ ಮಾಡಿದ್ದಾರೆ. ಇದರಿಂದಾಗಿ, 2024ರ ಜೂನ್ 8 ರಂದು ಕೊಲೆಯಾದ ಬಳಿಕ ಚಿತ್ರದುರ್ಗದಲ್ಲಿ ಅಂತ್ಯಸಂಸ್ಕಾರಗೊಂಡಿದ್ದ ದಿವಂಗತ ರೇಣುಕಾಸ್ವಾಮಿಗೆ ಸತ್ತ ಮೇಲೂ ನೆಮ್ಮದಿ ಸಿಗದಂತಾಗಿದೆ.

ಬೆಂಗಳೂರಿನ ರಾಜಕಾಲುವೆ ಬಳಿ ಬೀದಿ ಹೆಣವಾಗಿ ಬಿದ್ದಿದ್ದ ರೇಣುಕಾಸ್ವಾಮಿ ಮೃತದೇಹವನ್ನು ಚಿತ್ರದುರ್ಗಕ್ಕೆ ತರಲಾಗಿದ್ದು, ಪತ್ನಿ ಸಹನಾ ಮತ್ತು ಪಾಲಕರ ಸಮ್ಮುಖದಲ್ಲಿ ಲಕ್ಷ್ಮೀಪುರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು.

ರೇಣುಕಾಸ್ವಾಮಿ ಸಮಾಧಿ ಧ್ವಂಸಗೊಳಿಸಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ತಿಳಿದಿಲ್ಲ ಎಂದು ಹೇಳಿದ್ದರೂ, ಸ್ಥಳೀಯರಲ್ಲಿ ಕೆಲವು ಶಂಕೆಗಳು ವ್ಯಕ್ತವಾಗಿವೆ.

ಲೇಔಟ್ ನಿರ್ಮಾಣ ಶಂಕೆ: ರುದ್ರಭೂಮಿ ಬಳಿ ಲೇಔಟ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ವೇಳೆ ರೇಣುಕಾಸ್ವಾಮಿ ಸಮಾಧಿಗೆ ಧಕ್ಕೆ ಆಗಿರುವ ಸಾಧ್ಯತೆ ಇದೆ ಎಂದು ಹಲವರು ಶಂಕಿಸಿದ್ದಾರೆ.

ಕಿಡಿಗೇಡಿಗಳ ಕೃತ್ಯ: ಇಲ್ಲವೇ, ನಟ ದರ್ಶನ್ ಅಭಿಮಾನಿಗಳು ಅಥವಾ ದ್ವೇಷ ಸಾಧಿಸಲು ಬಯಸುವ ಕೆಲವು ಕಿಡಿಗೇಡಿಗಳು ಡೆವಿಲ್ ಸಿನಿಮಾ ಬಿಡುಗಡೆಗೂ ಮುನ್ನ ಪ್ರಚಾರದ ಗಿಮಿಕ್ ಉದ್ದೇಶದಿಂದ ಈ ಕೃತ್ಯ ಎಸಗಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ರೇಣುಕಾಸ್ವಾಮಿ ಸಮಾಧಿಯನ್ನು ಯಾವ ಕಾರಣದಿಂದ ಧ್ವಂಸ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಈ ಘಟನೆಯು ರೇಣುಕಾಸ್ವಾಮಿ ಕುಟುಂಬಕ್ಕೆ ಮತ್ತೊಂದು ಆಘಾತ ತಂದಿದೆ. ಚಿತ್ರದುರ್ಗ ನಗರಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ, ಸಮಾಧಿ ಧ್ವಂಸಗೊಳಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.ಸದ್ಯ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಟ್ರಯಲ್ ನಡೆಯುತ್ತಿದ್ದು, ಕುಟುಂಬಸ್ಥರಿಗೆ ನ್ಯಾಯ ಸಿಗುವ ನಿರೀಕ್ಷೆ ಇತ್ತು. ಆದರೆ, ಈ ಅಮಾನವೀಯ ಘಟನೆಯಿಂದಾಗಿ ಮೃತರ ಕುಟುಂಬಸ್ಥರ ದುಃಖ ಇಮ್ಮಡಿಯಾಗಿದೆ.