Mangalore: ಮಂಗಳೂರು : ಮದುವೆಗೆ ಎರಡು ದಿನ ಬಾಕಿಯಿರುವಾಗ ವರ ಪರಾರಿ

Mangalore: ಮದುವೆ ಇಷ್ಟ ಇಲ್ಲ ಎಂದು ಹೇಳದೆ ಕೇಳದೆ ಯುವಕ ಚೆನ್ನೈಗೆ ಹೋಗಿದ್ದಾನೆ. ಹೌದು, ಮದುವೆಗೆ ಎರಡು ದಿನಗಳು ಬಾಕಿಯಿರುವಂತೆಯೇ ಯುವಕನೊಬ್ಬ ಕಾರಿನ ಜತೆ ನಾಪತ್ತೆಯಾಗಿದ್ದು, ಆತ ಚೆನ್ನೈಗೆ ತೆರಳಿರುವ ಬಗ್ಗೆ ಮಾಹಿತಿ ಲಭಿಸಿದೆ. ಜಪ್ಪು ಮಾರ್ಕೆಟ್ ಅರಕೆರೆಬೈಲುವಿನ ನಿವಾಸಿ ರಕ್ಷಣ್ ಜೆ.ಕೆ. (32) ನಾಪತ್ತೆಯಾಗಿ ಚೆನ್ನೈಗೆ ತೆರಳಿದವರು.

ರಕ್ಷಣ್ ತನ್ನ ಮನೆಯಿಂದ ಡಿ.6ರಂದು ಬೆಳಗ್ಗೆ 11.30ಕ್ಕೆ ತನ್ನ ತಾಯಿಯ ಕಾರಿನಲ್ಲಿ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರು ಹಾಗೂ ಗೆಳೆಯರಿಗೆ ನೀಡಲೆಂದು ಹೋಗಿದ್ದರು. ಆ ಬಳಿಕ ಮನೆಗೂ ಬಾರದೆ, ಸಂಬಂಧಿಕರ ಮನೆಗೂ ತೆರಳದೆ, ಮೊಬೈಲ್ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದರು. ಶನಿವಾರ ಮಧ್ಯಾಹ್ನ ತಾಯಿಗೆ ಕರೆ ಮಾಡಿ ಅರ್ಧಗಂಟೆಯಲ್ಲಿ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದರೂ ಮರಳಿ ಬಂದಿಲ್ಲ, ಮೆಸೇಜ್ ಕೂಡ ನೋಡಿಲ್ಲ. ಭಾನುವಾರ ಸಂಜೆ ರಕ್ಷಣ್ ಜೆ.ಕೆ. ಅವರ ಮೆಹಂದಿ ಕಾರ್ಯಕ್ರಮವಿತ್ತು. ಅ.6ರಂದು ರಾತ್ರಿ 10.30ರ ವೇಳೆ ಯುವಕ ತೆರಳಿದ್ದ ಕಾರು ನಗರದ ಪುರಭವನ ಬಳಿ ಪತ್ತೆಯಾಗಿದೆ. ಕಾರು ಲಾಕ್ ಆದ ಸ್ಥಿತಿಯಲ್ಲಿತ್ತು.
Comments are closed.