Vande Mataram: 150 ವರ್ಷಗಳ ಬಳಿಕ ‘ವಂದೇ ಮಾತರಂ’ ಗೀತೆ ವಿವಾದಕ್ಕೆ ಗುರಿಯಾಗಿದ್ದೇಕೆ? ಅಂದು ಕಾಂಗ್ರೆಸ್ ಮಾಡಿದ್ದ ಎಡವಟ್ಟೇನು?

Vande Mataram: ಭಾರತದ ರಾಷ್ಟ್ರಗೀತೆಗಳಲ್ಲಿ ಒಂದಾಗಿರುವ ಒಂದೇ ಮಾತರಂ ಗೀತೆಗೆ ಇದೀಗ 150 ವರ್ಷಗಳು ಸಂಧಿವೆ. ಈ ಶುಭ ಸಂದರ್ಭದಲ್ಲಿ ಈ ಗೀತೆಯು ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೆ ಸಂಸತ್ತಿನಲ್ಲಿಯೂ ಈ ವಿಚಾರ ಮಾರ್ಧನಿಸಿದೆ. ಹಾಗಿದ್ದರೆ ಬರೋಬ್ಬರಿ 150 ವರ್ಷಗಳ ಬಳಿಕ ಇದು ಚರ್ಚೆಗೆ ಗ್ರಾಸವಾಗಿದ್ದು? ಅಂದು ಕಾಂಗ್ರೆಸ್ ಮಾಡಿದ ತಪ್ಪೇನು?

ಹೌದು, 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯ ಗುರುತಿನ ಅವಿಭಾಜ್ಯ ಅಂಗವಾಗಿರುವ ಈ ದೇಶಭಕ್ತಿಯ ಗೀತೆಯ ವಿಚಾರವಾಗಿ ಪ್ರಸ್ತುತ ಸಂಸತ್ತಿನಲ್ಲಿ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಸೋಮವಾರ(ಡಿ.08) ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಚರ್ಚೆಯನ್ನು ಆರಂಭಿಸಿದ್ದು, ಬಿಜೆಪಿ ವಂದೇ ಮಾತರಂಗೆ ಸಂಬಂಧಿಸಿದ ಹಲವಾರು ಪ್ರಮುಖ ಅಂಶಗಳನ್ನು ರಾಷ್ಟ್ರದ ಮುಂದೆ ತರುವುದಾಗಿ ಹೇಳಿದೆ. ಈ ಚರ್ಚೆಗಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಲಾ 10 ಗಂಟೆಗಳ ಚರ್ಚೆಯನ್ನು ನಿಗದಿಪಡಿಸಲಾಗಿದ್ದು, ಸರ್ಕಾರ ಮತ್ತು ವಿರೋಧ ಪಕ್ಷದ ಪ್ರಮುಖ ನಾಯಕರು ತೀವ್ರ ಚರ್ಚೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಈ ಚರ್ಚೆ ಏಕೆ?
ಪಂಕಿಮ ಚಂದ್ರ ಚಟರ್ಜಿಯವರು ಬರೆದ ಒಂದೇ ಮಾತರಂ ಗೀತೆಯಲ್ಲಿ, 1937 ರಲ್ಲಿ ಹಲವಾರು ಚರಣಗಳನ್ನು ಕಾಂಗ್ರೆಸ್ ಕೈಬಿಟ್ಟಿದೆ ಎಂದು ಆರೋಪಿಸಿ ಪ್ರಧಾನಿ ಮೋದಿ ಆರೋಪಿಸಿ ಇದನ್ನು ಚರ್ಚೆಗೆ ನಾಂದಿ ಮಾಡಿಕೊಟ್ಟಿದ್ದಾರೆ. ಈ ನಿರ್ಧಾರವು “ವಿಭಜನೆಯ ಬೀಜಗಳನ್ನು ಬಿತ್ತಿತು” ಮತ್ತು ಇಂದಿಗೂ ದೇಶ ಗುಲಾಮಿತನದ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಆರೋಪಿಸಿದ್ದರು. ಅಲ್ಲದೆ ಬರೆದ ಈ ಹಾಡಿನಲ್ಲಿ ಮೂಲತಃ ಬಹು ಚರಣಗಳಿದ್ದವು, ಆದರೆ ಮೊದಲ ಎರಡು ಚರಣ ಮಾತ್ರ ನಂತರ ಅಳವಡಿಸಿಕೊಳ್ಳಲಾಯಿತು.
ವಂದೇ ಮಾತರಂಗೆ ಅಂದು ಕಾಂಗ್ರೆಸ್ ಅಧಿವೇಶನದಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಇದಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡಬಾರದು ಎಂದು ಒತ್ತಾಯಿಸಿದ್ದರು. ನೆಹರು ಅವರು ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರಿಗೆ ಬರೆದ ಪತ್ರದಲ್ಲಿ, ‘ವಂದೇ ಮಾತರಂನಲ್ಲಿ ದುರ್ಗಾದೇವಿಯ ಬಗ್ಗೆ ಉಲ್ಲೇಖವಿದೆ. ಅದು ಮುಸ್ಲಿಮರಿಗೆ ನೋವುಂಟು ಮಾಡುತ್ತದೆ. ಇದು ರಾಷ್ಟ್ರಗೀತೆಯಾಗಲು ಅರ್ಹವಲ್ಲ ಎಂದು ನೆಹರು 1937ರಲ್ಲಿ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು. ದುರ್ಗೆಗೆ ಸಂಬಂಧಿಸಿದ ಚರಣಗಳನ್ನು ಕತ್ತರಿಸುವ ಮೂಲಕ ನೆಹರು ಮತ್ತು ಕಾಂಗ್ರೆಸ್ ಕೋಮುವಾದಿ ಕಾರ್ಯಸೂಚಿಗೆ ಲಜ್ಜೆಗೆಟ್ಟಂತೆ ಸಹಕಾರ ನೀಡಿರುವುದಾಗಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಷಯವೇ 150ವರ್ಷಗಳ ನಂತರ ಚರ್ಚೆಗೆ ಗ್ರಾಸವಾಗಲು ಕಾರಣವಾಗಿದೆ!
ಇನ್ನು ಸಂಸತ್ತಿನಲ್ಲಿ ಈ ವಿಚಾರವಾಗಿ ಮಾತನಾಡಿದ ಮೋದಿ ಅವರು ಆ ಗುಲಾಮಗಿರಿಯ ಕಾಲದಲ್ಲಿ, ‘ವಂದೇ ಮಾತರಂ’ ಭಾರತ ಮಾತೆಯ ಕೈಗಳಿಂದ, ಅಂದರೆ ಭಾರತದ ಸ್ವಾತಂತ್ರ್ಯದ ಕೈಗಳಿಂದ ಗುಲಾಮಗಿರಿಯ ಸಂಕೋಲೆಗಳನ್ನು ಮುರಿಯುವ ಸಂಕಲ್ಪದ ಘೋಷಣೆಯಾಯಿತು. ಆಕೆಯ ಮಕ್ಕಳು ತಮ್ಮ ಹಣೆಬರಹವನ್ನು ತಾವೇ ರೂಪಿಸಿಕೊಳ್ಳುವರು. ವಂದೇ ಮಾತರಂಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ದೇಶದ ಲಕ್ಷಾಂತರ ಮಹಾನ್ ಪುರುಷರು, ಭಾರತ ಮಾತೆಯ ಮಕ್ಕಳಿಗೆ ನಾನು ನನ್ನ ಗೌರವಯುತ ಗೌರವವನ್ನು ಸಲ್ಲಿಸುತ್ತೇನೆ ಮತ್ತು ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.
ನೆಹರೂ ಅವರ ನೈಜ ನಿಲುವೇನಿತ್ತು?
ಇತಿಹಾಸದ ಪುಟಗಳನ್ನು ಗಮನಿಸಿದರೆ, ಜವಾಹರಲಾಲ್ ನೆಹರೂ ಅವರು ‘ವಂದೇ ಮಾತರಂ’ ಅನ್ನು “ಭಾರತದ ಪ್ರಮುಖ ರಾಷ್ಟ್ರೀಯ ಗೀತೆ” ಎಂದು ಕರೆದಿದ್ದರೂ, ಅದನ್ನು ರಾಷ್ಟ್ರಗೀತೆಯಾಗಿ (National Anthem) ಆಯ್ಕೆ ಮಾಡಲು ಕೆಲವು ತಾಂತ್ರಿಕ ಕಾರಣಗಳನ್ನು ನೀಡಿದ್ದರು:
ಆರ್ಕೆಸ್ಟ್ರಾ ಮತ್ತು ಬ್ಯಾಂಡ್: ರಾಷ್ಟ್ರಗೀತೆಯು ಹಾಡುವುದಕ್ಕಿಂತ ಹೆಚ್ಚಾಗಿ ಆರ್ಕೆಸ್ಟ್ರಾ ಮತ್ತು ಬ್ಯಾಂಡ್‌ಗಳಲ್ಲಿ ನುಡಿಸಲು ಯೋಗ್ಯವಾಗಿರಬೇಕು. ‘ಜನ ಗಣ ಮನ’ ಇದಕ್ಕೆ ಸೂಕ್ತವಾಗಿದೆ, ಆದರೆ ‘ವಂದೇ ಮಾತರಂ’ನ ರಾಗ ಸಂಯೋಜನೆ ಬ್ಯಾಂಡ್‌ಗಳಲ್ಲಿ ನುಡಿಸಲು ಕಷ್ಟಕರ ಎಂದು ನೆಹರು ಅಭಿಪ್ರಾಯಪಟ್ಟಿದ್ದರು.
ವಿದೇಶಿಯರ ಗ್ರಹಿಕೆ: ‘ವಂದೇ ಮಾತರಂ’ ವಿದೇಶಿಯರಿಗೆ ಅರ್ಥವಾಗುವ ಅಥವಾ ಆಕರ್ಷಿಸುವ ರಾಗವನ್ನು ಹೊಂದಿಲ್ಲ ಎಂಬುದು ಅವರ ವಾದವಾಗಿತ್ತು.ಭಾಷೆ: ‘ವಂದೇ ಮಾತರಂ’ನ ಭಾಷೆ ಸಾಮಾನ್ಯ ಜನರಿಗೆ ಅರ್ಥಮಾಡಿಕೊಳ್ಳಲು ಕಷ್ಟ, ಆದರೆ ‘ಜನ ಗಣ ಮನ’ ಸರಳವಾಗಿದೆ ಎಂದು ಅವರು ಹೇಳಿದ್ದರು.
ಮುಸ್ಲಿಮರ ಆಕ್ಷೇಪ: ಕೆಲವು ಮುಸ್ಲಿಮರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ನಿಜ. ಹಾಗೆಂದು ರಾಷ್ಟ್ರಗೀತೆಯ ಆಯ್ಕೆಯಲ್ಲಿ ಅದುವೇ ಪ್ರಮುಖ ಕಾರಣವಾಗಿರಲಿಲ್ಲ ಎಂದು ನೆಹರೂ ಸ್ಪಷ್ಟಪಡಿಸಿದ್ದರು.
ಬಂಕಿಮಚಂದ್ರರು ಬರೆದ ಸಂಪೂರ್ಣ ವಂದೇ ಮಾತರಂ ಗೀತೆಯು ಹೀಗಿದೆ.
ವಂದೇಮಾತರಂ ಸುಜಲಾಂ
ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಂ !!ವಂದೇ ಮಾತರಂ!!
ಶುಭ್ರಜ್ಯೋತ್ಸ್ನಾ ಪುಳಕಿತ ಯಾಮಿನೀಂ
ಪುಲ್ಲಕುಸುಮಿತ ಧೃಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಮ್
ಸುಖದಾಂ ವರದಾಂ ಮಾತರಂ!! ವಂದೇ ಮಾತರಂ!!
ಕೋಟಿ ಕೋಟಿ ಕಂಠ ಕಾಲಕಾಲನಿನಾದ ಕರಾಲೇ
ಕೋಟಿ ಕೋಟಿ ಭುಜೈಧೃತ ಖರ ಕರವಾಲೇ
ಅಬಲಾ ಕೆನೋ ಮಾ ಏತೋ ಬಲೇ
ಬಹುಬಲಧಾರಿಣೀಮ್ ನಮಾಮಿ ತಾರಿಣೀಮ್
ರಿಪುದಲ ವಾರಿಣೀಮ್ ಮಾತರಂ!! ವಂದೇ ಮಾತರಂ!!
ತುಮಿ ವಿದ್ಯಾ ತುಮಿ ಧರ್ಮ
ತುಮಿ ಹೃದಿ ತುಮಿ ಮರ್ಮ
ತ್ವಂಹಿ ಪ್ರಾಣಃ ಶರೀರೇ
ಬಾಹುತೇ ತುಮಿ ಮಾ ಶಕ್ತಿ
ಹೃದಯೇ ತುಮಿ ಮಾ ಭಕ್ತಿ
ತೋಮಾರಾಯಿ ಪ್ರತಿಮಾ ಗಡಿ
ಮಂದಿರೇ ಮಂದಿರೇ!! ವಂದೇ ಮಾತರಂ!!
ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣೀ
ಕಮಲಾ ಕಮಲದಲವಿಹಾರಿಣೀ
ವಾಣೀ ವಿದ್ಯಾದಾಯಿನೀ
ನಾಮಾಮಿತ್ವಾಮ್ ನಮಾಮಿ ಕಾಮಲಾಂ
ಅಮಾಲಾಂ ಅತುಲಾಂ
ಸುಜಲಾಂ ಸುಫಲಾಂ ಮಾತರಂ !! ವಂದೇ ಮಾತರಂ!!
ಶ್ಯಾಮಲಾಂ ಸರಲಾಂ ಸುಸ್ಮಿತಾಂ ಭೂಷಿತಾಂ
ಧರಣೀಮ್ ಭರಣೀಮ್ ಮಾತರಂ!!ವಂದೇ ಮಾತರಂ!!
Comments are closed.