PG medical: ಪಿಜಿ ವೈದ್ಯಕೀಯ ಪ್ರವೇಶಕ್ಕೆ ದಿನಾಂಕ ವಿಸ್ತರಣೆ: ಕೆಇಎ

Share the Article

PG medical: ಇಂಡಿಗೋ ವಿಮಾನಗಳ (IndiGo Flights) ಸಂಚಾರ ರದ್ದಾಗಿರುವ ಕಾರಣ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA), ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳ‌ (PG medical) ಪ್ರವೇಶಕ್ಕೆ ಡಿ.8 ರವರೆಗೆ ದಿನಾಂಕ ವಿಸ್ತರಿಸಿದೆ.

ಅನೇಕ ವಿದ್ಯಾರ್ಥಿಗಳು ಮನವಿ ಮಾಡಿದ ಕಾರಣ ಈ ತೀರ್ಮಾನ ಮಾಡಲಾಗಿದೆ. ಈ ಸಂಬಂಧ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆ ಬಿಡುಗಡೆ ‌ಮಾಡಿದ್ದಾರೆ. ಛಾಯ್ಸ್ ದಾಖಲಿಸಲು ಡಿ.8ರಂದು ಬೆಳಗ್ಗೆ 11 ಗಂಟೆವರೆಗೆ ಅವಕಾಶ ನೀಡಲಾಗಿದೆ. ಛಾಯ್ಸ್-1 & 2 ದಾಖಲಿಸಿದವರು ಡಿ.8ರಂದು 12:30 ರೊಳಗೆ ಶುಲ್ಕ ಪಾವತಿಸಬೇಕು. ಛಾಯ್ಸ್-1 ಆಯ್ಕೆ ಮಾಡಿದ ಅಭ್ಯರ್ಥಿಗಳು ಡಿ.8ರಂದು ಮಧ್ಯಾಹ್ನ 2:30 ರವರೆಗೆ ಕೆಇಎ ಕಚೇರಿಯಲ್ಲಿ ಮೂಲ ದಾಖಲೆ ಸಲ್ಲಿಸಬೇಕು. ಮೂಲ ದಾಖಲೆ ಸಲ್ಲಿಸಿದ ನಂತರ ಡಿ.8 ರೊಳಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು.

Comments are closed.