Nitish kumar: 10 ಬಾರಿಗೆ ಪ್ರಮಾಣವಚನ ಸ್ವೀಕಾರ: ನಿತೀಶ್ ಕುಮಾ‌ರ್ ಹೆಸರು ವಿಶ್ವ ದಾಖಲೆಯಲ್ಲಿ ಸೇರ್ಪಡೆ!

Share the Article

Nitish kumar: ಬಿಹಾರದ (Bihar) ಸಿಎಂ (Nitish Kumar) ಅವರು ಇತ್ತೀಚೆಗೆ 10ನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ (Oath) ಸ್ವೀಕರಿಸಿದ್ದಾರೆ. ಇದೀಗ ನಿತೀಶ್ ಕುಮಾರ್ ಅವರ ಹೆಸರು ವಿಶ್ವ ದಾಖಲೆಗಳ ಪುಸ್ತಕ (WBR) ಸೇರಿದೆ.

ಹೌದು, ವಿಶ್ವ ದಾಖಲೆಗಳ ಪುಸ್ತಕದಲ್ಲಿ ನಿತೀಶ್ ಕುಮಾರ್ ಅವರ ಹೆಸರು ಸೇರ್ಪಡೆಯಾಗಿದೆ. ಈ ಮೂಲಕ ಅವರು ಜಾಗತಿಕ ಮನ್ನಣೆ ಪಡೆದಿದ್ದಾರೆ. ನಿತೀಶ್ ಕುಮಾರ್ 10ನೇ ಬಾರಿಗೆ ಸ್ವತಂತ್ರ ಭಾರತದಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನಿತೀಶ್ ಅವರನ್ನು ಡಬ್ಲ್ಯುಬಿಆ‌ರ್ ಅಭಿನಂದಿಸಿದೆ.

1947 ರಿಂದ 2025 ರವರೆಗೆ ಹತ್ತು ಬಾರಿ ಪ್ರಮಾಣವಚನ ಸ್ವೀಕರಿಸಿದ ಏಕೈಕ ವ್ಯಕ್ತಿ ನಿತೀಶ್ ಕುಮಾರ್ ಎಂದು ಡಬ್ಲ್ಯುಬಿಆರ್ ತನ್ನ ಅಭಿನಂದನಾ ಪತ್ರದಲ್ಲಿ ತಿಳಿಸಿದೆ. ಆಡಳಿತ, ಅಭಿವೃದ್ಧಿ ಸಮಾಜ ಕಲ್ಯಾಣ ಮತ್ತು ಆಡಳಿತಾತ್ಮಕ ಸ್ಥಿರತೆಯನ್ನು ಕಾಪಾಡಿಕೊಳ್ಳುವಲ್ಲಿ ನಿತೀಶ್ ಅವರ ನಿರಂತರ ಪ್ರಯತ್ನಗಳು ದೇಶಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿವೆ ಮತ್ತು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯನ್ನು ಪ್ರೇರೇಪಿಸುವುದನ್ನು ಮುಂದುವರಿಸುತ್ತವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅಪರೂಪದ ಸಾಧನೆಯ ಸಂಕೇತವಾಗಿ, ನಿತೀಶ್‌ ಅವರ ಹೆಸರನ್ನು ಡಬ್ಲ್ಯುಬಿಆರ್ ಪಟ್ಟಿಯಲ್ಲಿ ಸೇರಿಸಲಾಗಿದೆ.

Comments are closed.