Scam: 19 ನಿಮಿಷದ ವಿಡಿಯೋ ನೋಡೋ ಆಸೆಯಿಂದ ಲಿಂಕ್ ಕ್ಲಿಕ್ ಮಾಡ್ತೀರಾ? ಖಾಲಿಯಾಗಬಹುದು ನಿಮ್ಮ ಬ್ಯಾಂಕ್ ಖಾತೆ ಹುಷಾರ್

Scam : ಜೋಡಿಯೊಂದರ 19 ನಿಮಿಷದ ಖಾಸಗಿ ವಿಡಿಯೋ ಒಂದು ವೈರಲ್ ಆಗಿ ಇಂಟರ್ ನೆಟ್ ಜಗತ್ತಿನಲ್ಲಿ ಸಂಚಲನ ಉಂಟು ಮಾಡಿದೆ. ಆದರೆ ಇದನ್ನು ಸೈಬರ್ ಕ್ರೈಂ ಮಾಡುವವರು ತಮ್ಮ ಉಪಯೋಗಕ್ಕೆ ತಕ್ಕಂತೆ ಬಳಕೆ ಮಾಡಿಕೊಳ್ಳುತ್ತಿದ್ದು, ಹಣವನ್ನು ಬಾಚುತ್ತಿದ್ದಾರೆ.

ಹೌದು, 19 ನಿಮಿಷದ ಈ ವಿಡಿಯೋವನ್ನು ನೋಡಲು ಹಲವರು ತುದಿಗಳಲ್ಲಿ ನಿಂತು ಕಾದಿದ್ದರು. ಅನೇಕರಲ್ಲಿ ವಿಡಿಯೋ ಇದ್ದರೆ, ಲಿಂಕ್ ಇದ್ದಾರೆ ಸೆಂಡ್ ಮಾಡು ಮಗ ಎಂದು ಕೇಳಿದ್ದುಂಟು. ಎಲ್ಲಾ ಬೆಳವಣಿಗೆಗಳನ್ನು ಗಮನಿಸಿರುವ ಸೈಬರ್ ವಂಚಕರು ಇದನ್ನು ಹಣ ಪೀಕಲು ಬಳಸಿಕೊಳ್ಳುತ್ತಿದ್ದಾರೆ. ಇದರ ಕುರಿತು ಎಚ್ಚರ ವಹಿಸುವುದು ಅತ್ಯಗತ್ಯ.
ನಿಮ್ಮ ಫೋನಿಗೆ 19 ನಿಮಿಷದ ಅತ್ಯಂತ ಜನಪ್ರಿಯ ವಿಡಿಯೋ ನೋಡಿ ಎಂದು ಹೇಳಿ ಯಾವುದಾದರೂ ಒಂದು ಲಿಂಕ್ ಬರಬಹುದು. ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದ ತಕ್ಷಣ ಅದು ಸೀದಾ ವಾಟ್ಸಪ್ ಅಥವ ಟೆಲಿಗ್ರಾಂಗೆ ಕರೆದುಕೊಂಡು ಹೋಗುತ್ತದೆ. ಆದರೆ ಅಲ್ಲಿ ವಿಡಿಯೋ ಇರುವುದಿಲ್ಲ. ಬದಲಿಗೆ ಇದು ಒಂದು ಸೈಬರ್ ದಾಳಿಗೆ ಕಾರಣವಾಗುತ್ತದೆ. ಅಂತಿಮವಾಗಿ ಇದು ನಿಮ್ಮ ಮೊಬೈಲ್‌ನಲ್ಲಿ ಬ್ಯಾಂಕಿಂಗ್ ಉದ್ದೇಶಕ್ಕಾಗಿ ತಯಾರಿಸಿದ ಟ್ರೋಜನ್ (Trojan) ಅನ್ನು ಸ್ಥಾಪನೆ ಮಾಡುತ್ತದೆ. ಬಳಿಕ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಲು ಬೇಕಾದ ಅನುಮತಿಗಳನ್ನು ರಹಸ್ಯವಾಗಿ ಪಡೆಯಲಾಗುತ್ತದೆ.
Comments are closed.