Putin: ಅಂದು ಚೀನಾದಲ್ಲಿ ಕಾರೊಳಗೆ ಮೋದಿ ಜೊತೆ ನಡೆದ ರಹಸ್ಯ ಮಾತುಕತೆ ಏನು? ಕೊನೆಗೂ ರಿವಿಲ್ ಮಾಡಿದ ಪುಟಿನ್

Share the Article

Putin: ಕೆಲವು ತಿಂಗಳ ಹಿಂದೆ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆ ಭಾರತ ರಷ್ಯಾ ಸೇರಿದಂತೆ ದೇಶದ ಅನೇಕ ರಾಷ್ಟ್ರಗಳು ಭಾಗವಹಿಸಿದ್ದವು. ಈ ಸಭೆಯ ಬಳಿಕ ಚೀನಾದಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದು ಭಾರೀ ಸದ್ದು ಮಾಡಿತ್ತು. ಇದೀಗ ಈ ಕುರಿತು ಕೊನೆಗೂ ರಷ್ಯಾ ಅಧ್ಯಕ್ಷ ಪುಟಿನ್ ಮೌನ ಮುರಿದಿದ್ದಾರೆ.

ಹೌದು, ಸಭೆಯ ಬಳಿಕ ರಷ್ಯಾ ಅಧ್ಯಕ್ಷರ ಕಾರಿನಲ್ಲಿ ಮೋದಿ ಮತ್ತು ಪುಟಿನ್ ಒಟ್ಟಿಗೆ 50 ನಿಮಿಷಗಳ ಕಾಲ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರು ಯಾವ ವಿಚಾರ ಬಗ್ಗೆ ಮಾತನಾಡಿದ್ದರು ಎಂಬುದನ್ನು ಹೇಳಿರಲಿಲ್ಲ. ಇದೀಗ ಈ ಕುರಿತು ಮಾತನಾಡಿದ ಪುಟಿನ್‌ ಮೋದಿಯವರೊಂದಿಗಿನ ಕಾರು ಸವಾರಿ ನನ್ನ ಕಲ್ಪನೆಯಾಗಿತ್ತು. ಅದು ನಮ್ಮ ಸ್ನೇಹದ ಸಂಕೇತವಾಗಿತ್ತು ಎಂದು ಹೇಳಿದ್ದಾರೆ. ಇದು ಪೂರ್ವ ಯೋಜಿತವಾಗಿರಲಿಲ್ಲ. ನಾವು ಹೊರಗೆ ಹೆಜ್ಜೆ ಹಾಕಿದೆವು, ನನ್ನ ಕಾರು ಅಲ್ಲಿತ್ತು. ನಾವಿಬ್ಬರೂ ಒಟ್ಟಿಗೆ ಒಂದೇ ಕಾರಿನಲ್ಲಿ ಪ್ರಯಾಣ ಮಾಡೋಣ ಎಂದು ನಾನು ಹೇಳಿದೆ. ಅದಕ್ಕೆ ಅವರು ಒಪ್ಪಿಕೊಂಡು ಒಟ್ಟಿಗೆ ತೆರಳಿದೆವು ಎಂದು ಅವರು ಹೇಳಿದರು.

ಅಲ್ಲದೆ ಚರ್ಚಿಸಲು ಯಾವಾಗಲೂ ಏನಾದರೂ ನಮಗೆ ಇದ್ದೇ ಇರುತ್ತದೆ. ನಾವು ಡ್ರೈವ್ ಉದ್ದಕ್ಕೂ ಮಾತನಾಡಿದೆವು ಎಂದು ಅವರು ಹೇಳಿದರು. ಮೋದಿ ಸಹ ಈ ಭೇಟಿ ಕುರಿತು ತಮ್ಮ ಎಕ್ಸ್‌ನಲ್ಲಿ ಫೋಟೋ ಪೋಸ್ಟ್‌ ಮಾಡಿದ್ದರು.

Comments are closed.