ಮಂಗಳೂರು: ಡಿಕೆಶಿ ಮುಂದಿನ ಸಿಎಂ ಘೋಷಣೆ ಕೂಗಿದ ಮಿಥುನ್‌ಗೆ ನೋಟಿಸ್?

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಮಂಗಳೂರು ಭೇಟಿ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪರ ಘೋಷಣೆ ಕೂಗಿದ್ದು, ಈ ಕುರಿತು ಬಹಿರಂಗವಾಗಿ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ಮಿಥುನ್ ಗೆ ನೋಟಿಸ್ ನೀಡಲಾಗಿದೆ.

ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮಂಗಳೂರು ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವಾಗ ಕೈ ಕಾರ್ಯಕರ್ತರು ಡಿಕೆಶಿ ಡಿಕೆಶಿ ಎಂಬ ಘೋಷಣೆ ಕೂಗಿದ್ದರು. ಈ ಘೋಷಣೆಯಿಂದ ಸಿಟ್ಟಾದ ಕೆಸಿ ವೇಣುಗೋಪಾಲ್ ಅಲ್ಲಿಂದಲೇ ಡಿಕೆ ಶಿವಕುಮಾರ್‌ಗೆ ಕರೆ ಮಾಡಿದ್ದು, ಈ ರೀತಿ ಘೋಷಣೆ ಕೂಗಿದ ಕುರಿತು ಸಿಟ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವೇಣುಗೋಪಾಲ್ ಫೋನ್ ಕಾಲ್‌ಗೆ ನೋಟಿಸ್ ನೀಡುವುದಾಗಿ ಡಿಕೆಶಿ ಉತ್ತರ ನೀಡಿದ್ದರು.
ಇದೀಗ ಡಿಕೆಶಿ ಸೂಚನೆ ಮೇರೆಗೆ ಕಾಂಗ್ರೆಸ್ ಮುಖಂಡ ಮಿಥುನ್ ರೈಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.
Comments are closed.