Home Entertainment Rishab Shetty : ‘ಕಾಂತಾರ- 1’ ಭರ್ಜರಿ ಯಶಸ್ಸು- ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್...

Rishab Shetty : ‘ಕಾಂತಾರ- 1’ ಭರ್ಜರಿ ಯಶಸ್ಸು- ಪಂಜುರ್ಲಿ ದೈವಕ್ಕೆ ಹರಕೆ ತೀರಿಸಿದ ರಿಷಬ್ ಶೆಟ್ಟಿ, ಮುಂದಿನ ಸಿನಿಮಾ ಕುರಿತು ದೈವ ಹೇಳಿದ್ದೇನು?

Hindu neighbor gifts plot of land

Hindu neighbour gifts land to Muslim journalist

Rishab Shetty : ಕಾಂತಾರ ಚಾಪ್ಟರ್ 1′ ಚಿತ್ರದ ಭರ್ಜರಿ ಯಶಸ್ಸಿನ ನಂತರ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ತಮ್ಮ ಶ್ರೀಮತಿಯೊಂದಿಗೆ ಹಾಗೂ ಚಿತ್ರತಂಡದ ಜೊತೆಗೆ ಮಂಗಳೂರಿನ ಬಾರೆಬೈಲು ವರಾಹ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಇಂದು ಹರಕೆ ನೇಮೋತ್ಸವಕ್ಕೆ ಆಗಮಿಸಿ ಹರಕೆ ತೀರಿಸಿದ್ದಾರೆ.

ಹೌದು, ಕಾಂತಾರ’ ಚಿತ್ರವು ದೇಶವ್ಯಾಪಿ ಸಂಚಲನ ಸೃಷ್ಟಿಸಿ, ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಗಳಿಸಿದ ಬೆನ್ನಲ್ಲೇ, ರಿಷಬ್ ಶೆಟ್ಟಿ ಅದೇ ದೈವಸ್ಥಾನದಲ್ಲಿ ಹರಕೆಯನ್ನು ಸಲ್ಲಿಸಿದ್ದಾರೆ. ದೈವಸ್ಥಾನದ ನೇಮದಲ್ಲಿ ಭಾಗವಹಿಸುತ್ತಾ ಚಿತ್ರತಂಡ ದೈವದ ಆಶೀರ್ವಾದ ಪಡೆದಿದ್ದಾರೆ. ನಿರ್ಮಾಪಕ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ಆನಂದರಾಮ್, ಮತ್ತು ಚಿತ್ರರಂಗದ ಇನ್ನಿತರ ಹಲವು ಗಣ್ಯರು ಈ ನೇಮೋತ್ಸವದಲ್ಲಿ ಭಾಗವಹಿಸಿದರು. ಚಿತ್ರತಂಡದವರು ಗಗ್ಗರ ಸೇವೆ, ಅನ್ನಸಂತರ್ಪಣೆ ಸೇರಿದಂತೆ ಅನೇಕ ಸೇವಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಇನ್ನೂ ‘ಕಾಂತಾರ ಚಾಪ್ಟರ್ – 1’ ನಂತರ ಮುಂದಿನ ಭಾಗಗಳ ಕುರಿತು ಅಭಿಮಾನಿಗಳಲ್ಲಿ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನೇಮೋತ್ಸವದ ನಂತರ ರಿಷಬ್ ಶೆಟ್ಟಿ ಮತ್ತು ತಂಡ ಮುಂದಿನ ಕಾರ್ಯಗಳಿಗೆ ದೈವದ ಆಶೀರ್ವಾದ ಪಡೆದುಕೊಂಡಿದ್ದಾರೆ ಎಂಬ ಭಾವನೆ ಅಭಿಮಾನಿಗಳಲ್ಲಿ ಮೂಡಿದೆ.