Home News Darshan Case: ದರ್ಶನ್ ಗೆ ಇನ್ನು ಜೈಲಲ್ಲಿ ಟಿವಿ ನೋಡುವ ಭಾಗ್ಯ – ಹೈಕೋರ್ಟ್ ನಿಂದ...

Darshan Case: ದರ್ಶನ್ ಗೆ ಇನ್ನು ಜೈಲಲ್ಲಿ ಟಿವಿ ನೋಡುವ ಭಾಗ್ಯ – ಹೈಕೋರ್ಟ್ ನಿಂದ ಆದೇಶ

Hindu neighbor gifts plot of land

Hindu neighbour gifts land to Muslim journalist

Darshan Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಪ್ರಕರಣದ ವಿಚಾರಣೆ ನಿನ್ನೆ ನಡೆದಿದ್ದು ಈ ವೇಳೆ ಮಹತ್ವದ ಬೆಳವಣಿಗೆ ನಡೆದಿವೆ. ಅದೇನೆಂದರೆ ಕೋರ್ಟ್ ವಿಚಾರಣೆ ವೇಳೆ ದರ್ಶನ್ ಗೆ ಟಿವಿ ನೋಡುವ ಭಾಗ್ಯವನ್ನು ಕೋರ್ಟ್ ಕರುಣಿಸಿದೆ.

ಹೌದು, ಬುಧವಾರ (ಡಿ.3) ವಿಚಾರಣೆ ನಡೆದಿತ್ತು. ಪವಿತ್ರಾ ಗೌಡ, ದರ್ಶನ್ ಸೇರಿ ಹಲವರು ವಿಡಿಯೋ ಕಾನ್ಫೆರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಇದೇ ವೇಳೆ ದರ್ಶನ್‌ ಸೇರಿದಂತೆ ಇತರೆ ಆರೋಪಿಗಳು ತನ್ನ ಬ್ಯಾರಕ್ ನಲ್ಲಿ ಟಿವಿ ಹಾಕಿಸಿ ಕೊಡಿ ಎಂದು ಮನವಿ ಮಾಡಿದ್ದರು. ಹೀಗಾಗಿ ನಟ ದರ್ಶನ್ ತೂಗುದೀಪ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅವರಿಗೆ ಟಿವಿ ನೋಡಲು ಅವಕಾಶ ಮಾಡಿಕೊಟ್ಟಿದೆ. ಅವರ ಬ್ಯಾರಕ್‌ನಲ್ಲಿ ಟಿವಿ ಅಳವಡಿಕೆ ಆಗಲಿದೆ.

ಇನ್ನೂ ಪ್ರಕರಣ ವಿಚಾರಣೆಯು ಮುಂದುವರಿಯಲಿದ್ದು, ರೇಣುಕಾಸ್ವಾಮಿ ತಂದೆ-ತಾಯಿಗೆ ನೋಟಿಸ್ ಜಾರಿ ಮಾಡಿರುವ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿದೆ. ಪ್ರಕರಣದಲ್ಲಿ ರೇಣುಕಾಸ್ವಾಮಿ ತಂದೆ, ತಾಯಿ ಅವರನ್ನು ಪ್ರಕರಣ ಪರೋಕ್ಷ ಸಾಕ್ಷ್ಯಗಳೆಂದು ಪರಿಗಣಿಸಲಾಗಿದೆ. ಹೀಗಾಗಿ ಡಿಸೆಂಬರ್ 17ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.